26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಸುಲ್ಕೇರಿ ಒಕ್ಕೂಟದ ಸಹಯೋಗದಿಂದ ಜಲಸಂರಕ್ಷಣೆಯ ಅರಿವು ಕಾರ್ಯಕ್ರಮ

ಸುಲ್ಕೇರಿ :ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಸುಲ್ಕೇರಿ ಒಕ್ಕೂಟ ಇದರ ಸಹಯೋಗದಿಂದ ಜಲಸಂರಕ್ಷಣೆಯ ಅರಿವು ಎಂಬ ವಿಶೇಷ ಕಾರ್ಯಕ್ರಮವನ್ನು ಸುಲ್ಕೇರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲ್ಕೇರಿ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಮೇಲ್ವಿಚಾರಕರಾದ ಶ್ರೀಮತಿ ದಮಯಂತಿ, ಸೇವಪ್ರತಿನಿಧಿ ಶ್ರೀಮತಿ ಮಮತಾ ,ಜನಜಾಗೃತಿ ವೇದಿಕೆಯ ಸದಸ್ಯ ಸದಾನಂದ ಗೌಡ ,ಒಕ್ಕೂಟದ ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿ ಉಪಸ್ಥಿತರಿದ್ದರು.

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಚೈತ್ರಾ, ಪ್ರಿಯಾ ಹಾಗೂ ಆದರ್ಶ್ ಜಲಸಂರಕ್ಷಣೆಯ ಕುರಿತು ಮಾಹಿತಿ ನೀಡಿದ ಇವರು ಜೀವ ಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಹೇಗೆ ಸಂರಕ್ಷಿಸಬಹುದು ಹಾಗೂ ನೀರಿನ ಸಮರ್ಪಕ ನಿರ್ವಹಣೆಯ ವಿಧಾನವನ್ನು ತಿಳಿಸಿದರು.
ಕು| ಪ್ರಿಯ ಸ್ವಾಗತಿಸಿ ,ಆದರ್ಶ್ ವಂದಿಸಿದರು. ಶ್ರೀಮತಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು.

Related posts

ಮರೋಡಿ: ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ 90 ವರ್ಷದ ವಯೋವೃದ್ದೆ

Suddi Udaya

ಸುರತ್ಕಲ್ ಮುಕ್ಕದಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಜೀವನ್ ಕುಮಾರ್ ಸಾವು

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ನೇಮಕ

Suddi Udaya

ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ ನಿಧನ

Suddi Udaya

ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಿವೃತ್ತ ಕೆ. ಜಯಕೀರ್ತಿ ಜೈನ್ ರವರಿಗೆ ಬೆಳ್ತಂಗಡಿ ಸರಕಾರಿ ನೌಕರರ ಸಂಘದಿಂದ ಸನ್ಮಾನ

Suddi Udaya

ರೈತರ, ಜನ ಸಾಮಾನ್ಯರ ಬಜೆಟ್: ರಕ್ಷಿತ್ ಶಿವರಾಂ

Suddi Udaya
error: Content is protected !!