24.6 C
ಪುತ್ತೂರು, ಬೆಳ್ತಂಗಡಿ
May 18, 2025
ಶಾಲಾ ಕಾಲೇಜು

ಬದ್ಯಾರ್: ವಿದ್ವತ್ ಪಿಯು ಕಾಲೇಜ್ ಸಾಂಸ್ಕೃತಿಕ ಸೌರಭ

ಬದ್ಯಾರ್: ವಿದ್ವತ್ ಪಿಯು ಕಾಲೇಜ್ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಎ.೨೨ರಂದು ವೈಭವದಿಂದ ಮೂಡಿಬಂತು. ವಿದ್ವತ್ ಕಾಲೇಜು ಶಿಕ್ಷಣದ ಜೊತೆಗೆ ಪೂರಕವಾಗಿ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅಡಿಪಾಯ ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ವಿಶ್ವಸ್ಥರಾದ ಎಂ.ಕೆ ಕಾಶಿನಾಥ್ ಮತ್ತು ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷರಾದ ಶ್ರೀಮತಿ ಇಂದುಮತಿಯವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ವೇದವ್ಯಾಸ ಶಿಶು

ಮಂದಿರದ ಪುಟಾಣಿಗಳು ಮತ್ತು ಬಾಲಗೋಕುಲದ ವಿದ್ಯಾರ್ಥಿಗಳಿಂದ ಮನೋರಂಜನಾತ್ಮಕ ನೃತ್ಯಗಳು ನಡೆದವು. ಕಾರ್ಯಕ್ರಮದಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ವಿಶ್ವಸ್ಥರು ಉಪನ್ಯಾಸಕರು, ವೇದವ್ಯಾಸ ಶಿಶು ಮಂದಿರದ ಶಿಕ್ಷಕರು,ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ವಿದ್ವತ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರಜ್ವಲ್ ಜೆ ವಂದಿಸಿದರು. ಕನ್ನಡ ಉಪನ್ಯಾಸಕ ನೀಲಕಂಠ ಕಾರ್ಯಕ್ರಮದ ನಿರೂಪಿಸಿದರು.

Related posts

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಾರ್ಷಿಕೋತ್ಸವ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Suddi Udaya

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಆಶಿತಾ ಜೈನ್ ರವರಿಗೆ ರಾಷ್ಟ್ರಮಟ್ಟದ ಸಿಇಇ ಯಲ್ಲಿ 8ನೇ ರ್ಯಾಂಕ್ ಹಾಗೂ ರಾಜ್ಯದಲ್ಲಿ 2 ರ್ಯಾಂಕ್

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಜಿಲ್ಲಾ ಮಟ್ಟದ ಭಾವೈಕ್ಯತೆ ಮಕ್ಕಳ ಮೇಳ: ಕುಂಭಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!