
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ, ಮತ್ತುಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಸಂತಕಟ್ಟೆ ಮತ್ತು ಬಸ್ ನಿಲ್ದಾಣದ ಬಳಿ ಮತದಾನ ಜಾಗೃತಿ ಬಗ್ಗೆ ಬೀದಿ ನಾಟಕ ಪ್ರದರ್ಶನ ನಡೆಯಿತು.


ಈ ಸಂದರ್ಭ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರು ಪೃಥ್ವಿ ಸಾನಿಕಂ, ಸಹಾಯಕ ಚುನಾವಣಾಧಿಕಾರಿ ಕೆಂಪೇ ಗೌಡ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವೈಜಣ್ಣ, ತಾಲೂಕು ವ್ಯವಸ್ಥಾಪಕರಾದ ಪ್ರಶಾಂತ ಬಳಂಜ, ತಾಲೂಕು ಸಹಾಯಕ

ಲೆಕ್ಕಾಧಿಕಾರಿ ಗಣೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹೇಮಚಂದ್ರ, ನರೇಗಾ ಪ್ರಭಾರ ಸಹಾಯಕ ನಿರ್ದೇಶಕರು(ಗ್ರಾ. ಉ) ಶ್ರೀಮತಿ ಸಫಾನ, FST ತಂಡದ ಅಧಿಕಾರಿ ಪುರುಷೋತ್ತಮ. ಜಿ,DLMT ಯೋಗೇಶ್ H.R, TLMT ಶ್ರೀಮತಿ ದಿವ್ಯ ಕುಮಾರಿ, ಉಜಿರೆ ಶ್ರೀ. ಧ. ಮ.

ಸ್ವಾಯತ್ತ ಪದವಿ ಕಾಲೇಜಿನ ಎನ್. ಎನ್. ಎಸ್ ಘಟಕದ ಯೋಜನಾಧಿಕಾರಿ ಮಹೇಶ್ ಶೆಟ್ಟಿ, ಎನ್. ಎಸ್. ಎಸ್ ಸ್ವಯಂಸೇವಕರು, ನರೇಗಾ ಐಇಸಿ ಸಂಯೋಜಕರು ಶ್ರೀಮತಿ ವಿನಿಷ, ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

