27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುತ್ರೋಟ್ಟು ನಿವಾಸಿ ಫಯಾಜ್ ಸ್ಥಳೀಯ ಮಹಿಳೆ ಜೊತೆ ನಾಪತ್ತೆ ಶಂಕೆ: ಫಯಾಜ್ ನ ಪತ್ನಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು -ಪ್ರಕರಣ ದಾಖಲು

ನಡ ಗ್ರಾಮದ ಕುತ್ರೊಟ್ಟು ನಿವಾಸಿ ಫಯಾಜ್ , ಲಾಯಿಲ ಕಕ್ಕೇನದ ಮಹಿಳೆಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ, ಫಯಾಜ್ ನ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಎ.23 ರಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನಡ ಗ್ರಾಮದ ಕುತ್ರೊಟ್ಟು ನಿವಾಸಿ ಶ್ರೀಮತಿ ಮರಿಯಮ್ಮ ರವರು ನೀಡಿದ ದೂರಿನಂತೆ ಮರಿಯಮ್ಮ ರವರ ಪತಿ ಫಯಾಜ್ ಎ. 22 ರಂದು ಬೆಳ್ಳಿಗ್ಗೆ 6.30 ಗಂಟೆಗೆ ಮನೆಯಿಂದ ರಿಕ್ಷಾದಲ್ಲಿ ಬಾಡಿಗೆಗೆ ಎಂದು ಹೋದವರು, ಲಾಯಿಲದ ಕಕ್ಕೇನಕ್ಕೆ ಹೋಗಿ
ರಿಕ್ಷಾದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಈಗ ಇಬ್ಬರ ಮೊಬೈಲ್‌ ಸ್ವೀಚ್‌ ಆಫ್‌ ಆಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅವರು ಬರಬಹುದು ಎಂದು ಈ ತನಕ ಕಾದು ತಡವಾಗಿ ದೂರು ನೀಡುತ್ತಿದ್ದು ಲಾಯಿಲ ಕಕ್ಕೇನದ ಮಹಿಳೆಯ ಜೊತೆ ಕಾಣೆಯಾಗಿರುವ ಫಯಾಜ್‌ ಪತ್ತೆ ಹಚ್ಚಿ ಕೊಡಬೇಕಾಗಿ ದೂರಿನಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಕರಾಟೆ ಚಾಂಪಿಯನ್ ಶಿಪ್: ಬಜಿರೆ ಪಿ. ಎಂ.ಶ್ರೀ ಸ.ಉ. ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಗೈಡ್ಸ್ ನಿಂದ ವೀರಯೋಧ ಸ್ಕೌಟ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಗೆ ಶ್ರದ್ಧಾಂಜಲಿ

Suddi Udaya

ಗೋವಿಂದೂರು: ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya

ನಾಳ ದೇವಸ್ಥಾನದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ

Suddi Udaya

ನಾಲ್ಕೂರು: ರಾಮನಗರದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ ರಕ್ಷಾಬಂಧನ ಕಾರ್ಯಕ್ರಮ

Suddi Udaya
error: Content is protected !!