April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ: ಶಿವಕೀರ್ತಿ ನಿಲಯದಲ್ಲಿ‌ “ಹನುಮ‌ ಜಯಂತಿ” ಆಚರಣೆ

ಶಿಶಿಲ : ರಾಮ ಹನುಮ ಈ ಭೂಮಿಯಲ್ಲಿ ಚಿರಕಾಲ ಇದ್ದಾರೆ. ಎಲ್ಲಿ ಭಕ್ತಿಯಿಂದ ಭಜಿಸುವವರಿರುತ್ತಾರೊ ಅಲ್ಲಿ ರಾಮ ಹನುಮನಿರುತ್ತಾರೆ. ಭಜನೆ ಸಂಸ್ಕಾರ ಬೆಳೆಸುತ್ತದೆ. ಅಳುಕನ್ನು ದೂರ ಮಾಡುತ್ತದೆ. ನಮ್ಮ ಧರ್ಮ ನಂಬಿಕೆ ಇರುವಲ್ಲಿ ಹನುಮ ರಾಮನಿರುತ್ತಾರೆ. ನಾವು ಇರುವಲ್ಲಿಯವರೆಗೆ ಅವರೂ ಇರುತ್ತಾರೆ. ಅವರು ಇರುವಲ್ಲಿಯವರೆಗೆ ನಾವೂ ಇರುತ್ತೆವೆ. ಎಂದು ಸಾಹಿತಿ, ಬರಹಗಾರ, ನಿವೃತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೇಶ್ವರ ಭಟ್ ತಿಳಿಸಿದರು.


ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ‌ ನಡೆದ ” ಹನುಮ‌ ಜಯಂತಿ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಕಾರ್ಯಕ್ರಮವನ್ನು ಅರಿಕೆಗುಡ್ದೆ ದೇವಾಲಯದ ಪ್ರಕಾಶ್ ಪಿಲಿಕಬೆ ಉದ್ಘಾಟನೆ ಮಾಡಿ ಹನೂಮಂತ ರಾಮಾಯಣದ ರತ್ನ, ಭಕ್ತಿಗೆ ಮತ್ತು ಆದರ್ಶಕ್ಕೆ ಹನುಮ ನಮಗೆಲ್ಲಾ ಮಾದರಿ . ಹನುಮನ ಭಜಿಸಿದವರಿಗೆ ಎಲ್ಲಾ ಪುಣ್ಯ ಕಾರ್ಯಗಳೂ ಜೀವನದಲ್ಲಿ ಲಭಿಸಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯಿಂದ ಕುಣಿತ ಭಜನೆ, ಭಜನಾ ಪಟುಗಳಿಗೆ ಅಭಿನಂದನೆ, ರಾಮಾಯಣ ಹಕ್ಕಿ ನೋಟ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ಜರಗಿತ್ತು.
ಭಜನಾ ಕಾರ್ಯಕ್ರಮವನ್ನು ಸುಂದರ ಬಿಳಿನೆಲೆ ಮತ್ತು ತಂಡದವರು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಗ್ಗ, ಉದಯಶಂಕರ ಅರಸಿನಮಕ್ಕಿ, ಪುತ್ತೂರು ರವೀಂದ್ರ ಕುದ್ದಣ್ನಾಯ, ಭಾಸ್ಕರ ರಾವ್ ಮುಂಡ್ರುಪ್ಪಾಡಿ , ರವಿ ಕಾಸರಗೋಡು, ವಿಶು ಕುಮಾರ್ ಪೆರೆಡೆಲು, ಪ್ರೇಮಚಂದ್ರ ಪೆರ್ಲ, ಮೋಹನ ನೆಲ್ಲಿತ್ತಾಯ, ಶಿವರಾಮ ನೆಲ್ಲಿತ್ತಾಯ, ಶ್ರೀಪತಿ ಶಿಶಿಲ, ಪ್ರಕಾಶ ನೆಲ್ಲಿತ್ತಾಯ ಮುಂತಾದವರು ಭಾಗವಹಿಸಿದ್ದರು.

Related posts

ಅಶ್ವಮೇಧ ಕಾಮರ್ಸ್ ಫೆಸ್ಟ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರಿಗೆ ರಾಜ್ಯಪಾಲರಿಂದ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ ಪ್ರದಾನ

Suddi Udaya

ಕೊಕ್ಕಡ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬೇಬಿ, ಉಪಾಧ್ಯಕ್ಷರಾಗಿ ಪ್ರಭಾಕರ್ ಮಲ್ಲಿಗೆ ಮಜಲು ಆಯ್ಕೆ

Suddi Udaya

ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಉಜಿರೆ ಲಕ್ಷ್ಮೀ ಗ್ರೂಪ್ ಗೆ ಭೇಟಿ

Suddi Udaya

ಉಪ್ಪಾರಪಳಿಕೆ ಸರಕಾರಿ ಉ. ಹಿ.ಪ್ರಾ. ಶಾಲೆಯಲ್ಲಿ 400 ಅಡಿಕೆ ಗಿಡ ನೆಡುವ ಕಾರ್ಯಕ್ರಮ

Suddi Udaya

ಕುತ್ಲೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ರಾಜಶ್ರೀ, ಉಪಾಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಆಯ್ಕೆ

Suddi Udaya
error: Content is protected !!