April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್: ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ಪರಿಶೀಲನೆ: 241 ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಹಾಗೂ ಪರಿಕರಗಳ ವಿತರಣೆ ಆರಂಭ

ಬೆಳ್ತಂಗಡಿ : ಎ.26 ರಂದು (ನಾಳೆ) ನಡೆಯಲಿರುವ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಮಸ್ಟರಿಂಗ್ ಎ.25 ರಂದು ಉಜಿರೆ ಶ್ರೀ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ನಡೆಯಿತು.
ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಹಾಯಕ ಚುನಾವಣಾಧಿಕಾರಿ ಕೆಂಪೇ ಗೌಡ ಹಾಗೂ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮತ ಪೆಟ್ಟಿಗೆ ಹಾಗೂ ಮತದಾನಕ್ಕೆ ಸಂಬಂಧಿಸಿದಂತೆ ಪರಿಕರಗಳನ್ನು ವಿತರಿಸಲಾಯಿತು.


ತಾಲೂಕಿನಲ್ಲಿ 1375 ಮತಗಟ್ಟೆ ಅಧಿಕಾರಿಗಳು, 75 ಹೆಚ್ಚುವರಿ ಅಧಿಕಾರಿಗಳು, 1500 ಇತರ ಸಿಬ್ಬಂದಿಗಳು ಕಾರ್ಯ
ನಿರ್ವಹಿಸಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಅಧ್ಯಕ್ಷಾಧಿಕಾರಿ. ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ, ಇಬ್ಬರು ಸಿಬ್ಬಂದಿ, ಒಬ್ಬ ಡಿ ದರ್ಜೆ ನೌಕರ ಇರುತ್ತಾರೆ. ಒಂದು ಸಾವಿರಕ್ಕೂ ಮಿಕ್ಕಿ ಮತದಾರರಿರುವ ಮತಗಟ್ಟಿಗೆ ಒಬ್ಬ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ, ನಾಲ್ಕು ಮಂದಿ ಸಿಬ್ಬಂದಿಗಳಂತೆ ನಿಯೋಜನೆ ಮಾಡಲಾಗಿದ್ದು, ಮತಗಟ್ಟೆ ಹೋಗಲು ಅವರಿಗೆ, ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ.


ಒಂದು ಮತಗಟ್ಟೆಯಲ್ಲಿ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಒಬ್ಬ ಗೃಹರಕ್ಷಕ ಸಿಬ್ಬಂದಿ, ಸೂಕ್ಷ್ಮ ಮತಗಟ್ಟೆಗಲ್ಲಿ ಓರ್ವ ಹೆಡ್ ಕಾನ್‌ಸ್ಟೇಬಲ್, ಓರ್ವ ಕಾನ್‌ಸ್ಟೇಬಲ್, ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಓರ್ವ ಹೆಡ್ ಕಾನ್‌ಸ್ಟೇಬಲ್, ಓರ್ವ ಕಾನ್‌ಸ್ಟೇಬಲ್ ಜೊತೆಗೆ ಓರ್ವ ಗೃಹರಕ್ಷಕ ದಳ ಸಿಬಂದಿ ಕಾಯ೯ನಿವ೯ಹಿಸಲಿದ್ದಾರೆ.
ನಕ್ಸಲ್ ಬಾಧಿತ ಪ್ರದೇಶದ ಮತಗಟ್ಟೆಯಲ್ಲಿ ಪೊಲೀಸ್ ಸಿಬಂದಿ, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ರಾಜ್ಯ ಮೀಸಲು
ಸಿಬ್ಬಂದಿಗಳು, ನಕ್ಸಲ್ ನಿಗ್ರಹದಳ ಪೊಲೀಸ್ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸ್ ಸಿಬಂದಿ, ಬಿ.ಎಸ್.ಎಫ್ (ಬೋರ್ಡ್ ಸೆಕ್ಯೂರಿಟಿ ಪೋರ್ಸ್) ಸಿಬ್ಬಂದಿ, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಕೆಎಸ್‌ಆರ್‌ಪಿಯ ಸಿಬ್ಬಂದಿ, ಗೃಹರಕ್ಷಕ ದಳದ ದ.ಕ. ಶಿವಮೊಗ್ಗ, ಬೆಳ್ತಂಗಡಿ ಘಟಕದ ಸಿಬ್ಬಂದಿ, ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಎಸ್.ಐ. ಎಎಸ್‌ಐ, ಮೀಸಲು ಪಡೆಯಲ್ಲಿ ಆಯಾಯ ಗುಂಪಿನ ಕಮಾಂಡೆಂಟ್‌ಗಳು ಮತ್ತು ಇತರ ದರ್ಜೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. 14 ಸೆಕ್ಟರ್‌ಗಳಲ್ಲೂ ಸಂಚಾರಿ ಘಟಕ ಮತ್ತು ಅದರ ಮೇಲುಸ್ತುವಾರಿ ನೋಡಿಕೊಳ್ಳಲು ಮೂರು ವಿಶೇಷ ಮೊಬೈಲ್ ಘಟಕಗಳು ಹಾಗೂ ಒಂದು ಸಂಚಾರಿ ಡಿವೈಎಸ್‌ಪಿ ನೇತೃತ್ವದ ಘಟಕ ಕಾರ್ಯಾನಿರ್ವಹಿಸಲಿದ್ದು, ತಾಲೂಕಿನಲ್ಲಿ ಯಶಸ್ವಿ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

Related posts

ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಸಚಿವ ಈಶ್ವರ ಖಂಡ್ರೆಯವರಿಂದ ಅಧಿಕೃತ ಘೋಷಣೆ

Suddi Udaya

ಲಾಯಿಲ: ನಾಟಿ ವೈದ್ಯ ಭೋಜ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಭಟ್ ನಿಧನ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ, ಕಾರ್ಯದರ್ಶಿಯಾಗಿ ಗಣೇಶ್ ಶಿರ್ಲಾಲು, ಕೋಶಾಧಿಕಾರಿಯಾಗಿ ಪುಷ್ಪರಾಜ್ ಆಯ್ಕೆ

Suddi Udaya
error: Content is protected !!