ಪುಂಜಾಲಕಟ್ಟೆ: ಆಂತರಿಕ ಗುಣಮಟ್ಟ ಭರವಸ ಕೋಶ, ಭಾರತೀಯ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕ, ರಾಷ್ಟ್ರೀಯ ಸೇವಾಯೋಜನೆ, ರೋಟರಿ ಕ್ಲಬ್ ಮಡಂತ್ಯಾರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದೊಂದಿಗೆ ಎ. 22 ರಂದು ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ರೋಟರಿ ಕ್ಲಬ್ ಮಡಂತ್ಯಾರು ಇದರ ಅಧ್ಯಕ್ಷ ಟಿ. ವಿ. ಶ್ರೀಧರ್ ರಾವ್ ಪೇಜಾವರ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ಯಾಮ್ ರಾವ್ ರಕ್ತದಾನದ ಮಹತ್ವ ಕುರಿತು ಮಾತನಾಡಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರದ ವೈದ್ಯಕೀಯ ಅಧಿಕಾರಿಯವರು ರಕ್ತದಾನದ ಅರಿವನ್ನು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಧವ ಎಂ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರದ ವೈದ್ಯಕೀಯ ಅಧಿಕಾರಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಧವ ಎಂ. ಐಕ್ಯೂಎಸಿ ಸಂಚಾಲಕರಾದ ಡಾ. ಅವಿತ ಮರಿಯಾ ಕ್ವಾಡ್ರಾಸ್, ರೋವರ್ಸ್, ರೇಂಜರ್ಸ್ ಘಟಕದ ಸಂಚಾಲಕರಾದ ಪ್ರೊ. ಆಂಜನೇಯ ಎಂ ಎನ್, ಭಾರತೀಯ ಯುವ ರೆಡ್ ಕ್ರಾಸ್ ನ ಸಂಚಾಲಕರಾದ ಡಾ. ವೈಶಾಲಿ ಯು, ಪ್ರೊ. ಶೇಖರ್ ಕೆ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಪ್ರೊ. ಸಂತೋಷ್ ಪ್ರಭು. ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೀರ್ತಿ ಸ್ವಾಗತಿಸಿ,. ದೀಕ್ಷಿತ. ಧನ್ಯವಾದವಿತ್ತರು. ದೀಕ್ಷಾ ನಿರೂಪಿಸಿದರು.
ಕಾಲೇಜಿನಿಂದ ಸುಮಾರು 80 ಯೂನಿಟ್ ರಕ್ತವನ್ನು ಸ್ವಯಂ ಸೇವಕರಿಂದ ಸ್ವೀಕರಿಸಲಾಯಿತು.