ಕಳಿಯ ಗ್ರಾ.ಪಂ. ವ್ಯಾಪಿಯಲ್ಲಿ ಬಿರುಸಿನ ಮತದಾನ: ಗಮನಸೆಳೆದ ಪಿಂಕ್(ಸಖಿ) ಮತಗಟ್ಟೆ : ಮತಗಟ್ಟೆ ಕೇಂದ್ರದಲ್ಲಿ ಮತದಾರರ ವಿವಿಧ ಬೇಡಿಕೆ

Suddi Udaya

Updated on:

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೂತ್ ಸಂಖ್ಯೆ 150, 151, 152 ರಲ್ಲಿ
ಮತದಾರರು ಮತ ಚಲಾಯಿಸುವ ಉತ್ಸಾಹದಿಂದ ಪೂರ್ವಾಹ್ನ 6 ಗಂಟೆಗೆ ಮೊದಲು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಳಿಗ್ಗೆ ಮಹಿಳೆಯರು ಮತ್ತು ಪ್ರಥಮ ಬಾರಿಗೆ ಮತ ಚಲಾಯಿಸುವ ಯುವ ಪೀಳಿಗೆ ಸರತಿ ಸಾಲಿನಲ್ಲಿ ನಿಂತು ಶಾಂತಿಯುತ ರೀತಿಯಲ್ಲಿ ಮತ ಚಲಾಯಿಸುತ್ತಿದ್ದಾರೆ.

ಕಳಿಯ ಗ್ರಾಮ ಬೂತ್ ಸಂಖ್ಯೆ 152 ರಲ್ಲಿ ಸಖೀ (ಪಿಂಕ್‌) ಮತಗಟ್ಟೆ ಕೇಂದ್ರವನ್ನು ಶೃಂಗಾರ ಮಾಡಿ ಸ್ಥಾಪಿಸಿದ್ದಾರೆ.

ಮತದಾರರ ಬೇಡಿಕೆ:
ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ ಸುಮಾರು 1369 ಮತದಾರರಿದ್ದು ಮತದಾರರು ಕಡಿಮ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿ ಮತ್ತೊಂದು ಬೂತ್ ಮಾಡಬೇಕು. ಹಿರಿಯ ನಾಗರಿಕರಿಗೆ ಮತ್ತು ಕೃಷಿಕರು ಹೆಚ್ಚು ಸಮಯ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಕಷ್ಟವಾಗುತ್ತದೆ. ಜನ ಪ್ರತಿನಿಧಿಗಳು ಮತ ಹಾಕಲು ಒತ್ತಾಯ ಮಾಡುತ್ತಾರೆ. ಅದರೆ ನಮ್ಮ ಈ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ನೇರವೇರಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಾವು ಮತ ಚಲಾವಣೆಗೆ ಬರುವುದಿಲ್ಲ. ಕಡಿಮೆ ಪಕ್ಷ ಸುಮಾರು 2 ರಿಂದ 3 ಗಂಟೆಗಳ ಕಾಲ ಮಳೆ, ಬಿಸಿಲಿನೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ಕಷ್ಟವಾಗುತ್ತದೆ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಪೋಲಿಸ್ ಭದ್ರತೆ ಮತ್ತು ಚುನಾವಣಾ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಮತ ಚಲಾಯಿಸುವುದಕ್ಕೆ ಮತದಾರೊಂದಿಗೆ ಸ್ಪಂದಿಸುತ್ತಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಯುತ್ತದೆ.

ಹಿರಿಯ ನಾಗರಿಕರು ಮತ ಚಲಾವಣೆಗೆ :
ಗೇರುಕಟ್ಟೆ ಜನತಾ ಕಾಲೋನಿ ನಿವಾಸಿಗಳಾದ ಮಹಮ್ಮದ್ ಕೆ.ಎಮ್ (86 ವರ್ಷ) ಮತ್ತು ಅಲಿಯಮ್ಮ(76 ವರ್ಷ) ದಂಪತಿಗಳು ಮತ ಚಲಾಯಿಸಿದರು. ಶ್ರೀಮತಿ ಕೆ.ಆರ್.ಶಾಂತ ಭಟ್ (80 ವರ್ಷ) ಕುಂಠಿನಿ, ಶ್ರೀಮತಿ ಲಕ್ಷ್ಮಿ ನಾಯ್ಕ್(88 ವರ್ಷ) ಹೀರ್ಯ, ಶ್ರೀಮತಿ ಹತಿಜಮ್ಮ ಮುಳ್ಳಗುಡ್ಡೆ(80 ವರ್ಷ) ಮತ್ತು ಗರ್ಭಿಣಿ, ಬಾಣಂತಿಯರು ಮತದಾನದ ಮೂಲಕ ಹಕ್ಕನ್ನು ಜವಾಬ್ದಾರಿಯಿಂದ ಮಾಡಿದರು.

Leave a Comment

error: Content is protected !!