24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ಲೋಕಸಭಾ ಚುನಾವಣೆ: ಬೆಳ್ತಂಗಡಿ ತಾಲೂಕಿನಲ್ಲಿ ಶೇ. 81.31 ಮತದಾನ

ಬೆಳ್ತಂಗಡಿ: ದ.ಕ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 241 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 7 ರಿಂದ‌ ಸಂಜೆ 6 ಗಂಟೆ ತನಕ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.31 ಮತದಾನವಾಗಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,32,817 ಮತದಾರರಲ್ಲಿ 1, 89,296 ಮತದಾರರು ಮತ ಚಲಾಯಿಸುವ ಮೂಲಕ ಶೇ 81.31 ಮತದಾನ ಆಗಿದೆ.
ಒಟ್ಟು 1,17,485 ಮಹಿಳಾ ಮತದಾರರಲ್ಲಿ 95,568 ಮತದಾರರು ಮತ ಚಲಾಯಿಸುವ ಮೂಲಕ ಶೇ 81.34 ಮತದಾನವಾಗಿದೆ. ಅದೇ ರೀತಿ 1,15,331‌ಪುರುಷ ಮತದಾರರಲ್ಲಿ 93,728 ಮತದಾರರು ಮತದಾನ ಮಾಡಿದ್ದು, ಶೇ 81.27 ಮತದಾನ ವಾಗಿದೆ.
ಕಳೆದ ಎರಡು ತಿಂಗಳಿನಿಂದ ಬಿರುಬಿಸಿಲು ಇರುವುದರಿಂದ ಬೆಳಗ್ಗಿನ ಹೊತ್ತು ಹಾಗೂ ಸಂಜೆಯ ಹೊತ್ತು ಮತಗಟ್ಟೆಗಳಲ್ಲಿ ಮತದಾರರು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಮತದಾನ ಮಾಡಿದರು.
ಬೆಳಗ್ಗಿನ ಹೊತ್ತಿನಲ್ಲಿ ಈ ಬಾರಿ ವಿವಿಧ ಮತಗಟ್ಟೆಗಳಿಗೆ ಅಧಿಕ ಸಂಖ್ಯೆಲ್ಲಿ ಮತದಾರರು ಆಗಮಿಸಿ ಮತದಾನ ಮಾಡುತ್ತಿದ್ದಾರೆ. ತಾಲೂಕು ಸಹಾಯಕ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡಿರುವುದರಿಂದ ಮತದಾನಕ್ಕೆ ಹೆಚ್ಚಿನ ಅನುಕೂಲವಾಯಿತು.
ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲೂ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಒದಗಿಸಿರುವುದು ಶಾಂತಿಯುತ ಮತದಾನಕ್ಕೆ ಕಾರಣವಾಯಿತು.ನಕ್ಸಲ್ ಏರಿದ ಮತಗಳಲ್ಲಿ ವಿಶೇಷ ನಿಗ ವಹಿಸಲಾಗೀತ್ತು. ತಾಲೂಕಿನಲ್ಲಿ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Related posts

ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ

Suddi Udaya

ರಸಪ್ರಶ್ನೆ ಸ್ಪರ್ಧೆ : ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಪ್ರಥಮ ಸ್ಥಾನ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಬಳಂಜ:ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಟಾಪರ್ ಅನುಪ್ರಿಯರವರಿಗೆ ಸನ್ಮಾನ

Suddi Udaya

ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಉತ್ತೀರ್ಣ

Suddi Udaya

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya
error: Content is protected !!