April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಲ್ಲಿ ರೂ. 986 ಕೋಟಿ ಒಟ್ಟು ವ್ಯವಹಾರ, ರೂ.12.01 ಕೋಟಿ ನಿವ್ವಳ ಲಾಭ

ಬೆಳ್ತಂಗಡಿ: ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು, 2023-24ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಅತ್ಯುಜ್ವಲ ಪ್ರಗತಿಯೊಂದಿಗೆ ರೂ.151 ಕೋಟಿ ಹೆಚ್ಚಳವನ್ನು ಸಾಧಿಸಿದೆ. ವರ್ಷಾಂತ್ಯ 31.03.2024ಕ್ಕೆ ಠೇವಣಾತಿಯು ರೂ.533 ಕೋಟಿ ಹಾಗೂ ಸಾಲ ರೂ.453 ಕೋಟಿಯೊಂದಿಗೆ ರೂ.986 ಕೋಟಿಯಾಗಿ, ನಿಗದಿತ ಗುರಿಯನ್ನು ದಾಟಿ ತನ್ನ Vision-2025 ನಂತೆ ಅತೀ ಶೀಘ್ರದಲ್ಲಿ ರೂ.1000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವತ್ತ ದೃಢ ಹೆಜ್ಜೆಯನ್ನಿಟ್ಟಿದೆ.

ಕೆ. ಜೈರಾಜ್ ಬಿ. ರೈ ಅಧ್ಯಕ್ಷರು 31.03.2024ಕ್ಕೆ ಠೇವಣಾತಿಯು ಹಿಂದಿನ ಸಾಲಿಗಿಂತ ರೂ.80 ಕೋಟಿ ಹೆಚ್ಚಳಗೊಂಡು ಶೇ.17ರಷ್ಟು ವೃದ್ಧಿಯಾಗಿರುತ್ತದೆ. ಸಾಲ ಮತ್ತು ಮುಂಗಡ ರೂ.71 ಕೋಟಿ ಹೆಚ್ಚಳಗೊಂಡು ಶೇ.19ರಷ್ಟು ವೃದ್ಧಿಯನ್ನು ಕಂಡಿರುತ್ತದೆ. ಒಟ್ಟು ವ್ಯವಹಾರ ರೂ.151 ಕೋಟಿ ಹೆಚ್ಚಳಗೊಂಡು ಶೇ.18ರಷ್ಟು ವೃದ್ಧಿಯಾಗಿ ಅತ್ಯುತ್ತಮ ಪ್ರಗತಿಯನ್ನು ಕಂಡಿದೆ. 2022-23ನೇ ಸಾಲಿನಲ್ಲಿ ಮಾಡಿರುವ ರೂ. 3,089 ಕೋಟಿ ವಾರ್ಷಿಕ ವಹಿವಾಟು (Turnover), 2023-24ನೇ ಸಾಲಿನಲ್ಲಿ ರೂ. 4,000 ಕೋಟಿ ದಾಟಿದೆ. ಸಂಘವು ವರ್ಷಾಂತ್ಯ 31.03.2024ಕ್ಕೆ ಕಳೆದ ಸಾಲಿಗಿಂತ 22% ವೃದ್ಧಿಯೊಂದಿಗೆ ರೂ.12 ಕೋಟಿ ಮೀರಿದ ನಿವ್ವಳ ಲಾಭ (ಗುರಿ ರೂ.10 ಕೋಟಿ), Gross NPA 0.07% ಮಾತ್ರವಲ್ಲದೆ ಕಳೆದ 16 ವರ್ಷಗಳಿಂದ 0% ನಿವ್ವಳ ಅನುತ್ಪಾದಕ ಆಸ್ತಿಯೊಂದಿಗೆ, ತನ್ನ ಎಲ್ಲಾ ಕಾರ್ಯವೈಖರಿಯಲ್ಲಿ ಗುರಿ ಮೀರಿದ ಪ್ರಗತಿಯೊಂದಿಗೆ ಅಮೋಘ ಸಾಧನೆಯನ್ನು ಮಾಡಿದೆ. 1994ರಲ್ಲಿ ಸ್ಥಾಪನೆಯಾದ ಸಂಸ್ಥೆಯು, ಈ 30 ವರ್ಷಗಳ ಅವಧಿಯಲ್ಲಿ ರೂ.986 ಕೋಟಿ ಮೀರಿದ ವ್ಯವಹಾರ, ರೂ. 4000 ಕೋಟಿ ವಹಿವಾಟು, ರೂ.12.01 ಕೋಟಿ ನಿವ್ವಳ ಲಾಭ ಹಾಗೂ ಶೂನ್ಯ ನಿವ್ವಳ ಅನುತ್ಪಾದಕ ಆಸ್ತಿ ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಪ್ರಥಮ ಕ್ರೆಡಿಟ್ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ರಾಜ್ಯ ಮಟ್ಟದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯಲ್ಲಿ “ಉತ್ತಮ ಪತ್ತಿನ ಸಹಕಾರಿ ಸಂಘ” ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ “2022-23ನೇ ಸಾಲಿನ ಸರ್ವತೋಮುಖ ವ್ಯವಹಾರಾಭಿವೃದ್ಧಿ ಹೊಂದಿದ ಅತ್ಯುತ್ತಮ ಕ್ರೆಡಿಟ್ ಸಹಕಾರಿ ಸಂಘ” ಪ್ರಶಸ್ತಿಯನ್ನು ಪಡೆದಿದೆ. ಸಂಘದ Vision 2025ರಂತೆ 31.03.2025ಕ್ಕೆ 5 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಒಟ್ಟು 30 ಶಾಖೆಗಳನ್ನು ಹೊಂದಿ, ಕೇಂದ್ರ ಕಛೇರಿಗೆ 36,000 ಚ.ಅ. ವಿಸ್ತೀರ್ಣದ ಸುಸಜ್ಜಿತ ನೂತನ ಸ್ವಂತ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದ್ದು, ಡಿಸೆಂಬರ್ 2024ರೊಳಗೆ ಉದ್ಘಾಟನೆಗೊಳ್ಳುವ ಗುರಿಯನ್ನು ಹೊಂದಿದೆ.

ಪ್ರಸಕ್ತ ಸಾಲಿನಲ್ಲಿ, ಸಂಘವು ತನ್ನ ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸುಮಾರು ರೂ.5 ಲಕ್ಷದಷ್ಟು ಪ್ರತಿಭಾ ಪುರಸ್ಕಾರ, ಸಂಘದಲ್ಲಿ 25 ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ 19 ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಚಿನ್ನದ ಪದಕವನ್ನು ನೀಡಿ ಅಭಿನಂದಿಸಲಾಗಿದೆ. ಸಾಮಾಜಿಕ ಕಳಕಳಿ ಕಾರ್ಯಗಳಿಗೆ ಸದಾ ಸ್ಪಂದಿಸುವ ಸಂಘವು ವೆನ್ಸಾಕ್ ಆಸ್ಪತ್ರೆಯ ಲಯನ್ಸ್ ಆರ್ಟಿಫೀಶಿಯಲ್ ಲಿಂಬ್ ಸೆಂಟರ್‌ನಲ್ಲಿ ದೈಹಿಕ ವಿಕಲಚೇತನರಿಗೆ ಕೃತಕ ಅಂಗ ವಿತರಣೆಗೆ ಆರ್ಥಿಕ ಸಹಾಯವನ್ನು ನೀಡಿದೆ. ಸಂಘದ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿ, 1 ಲಕ್ಷಕ್ಕೂ ಅಧಿಕ ಸಂತೃಪ್ತ ಠೇವಣಿದಾರ, ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯದಕ್ಷತೆಯಿಂದ ತನ್ನ ಎಲ್ಲಾ ಕಾರ್ಯಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶಾಸಕ ಹರೀಶ್ ಪೂಂಜರ ವಿರುದ್ಧ ಪ್ರಕರಣ: ಎರಡೂ ಕೇಸುಗಳ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಗಣಿತ ದಿನಾಚರಣೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ನೂತನ ಅನ್ನಛತ್ರ ಉದ್ಘಾಟನೆ

Suddi Udaya

ಮಂಗಳೂರು ಸಂಸದ ಬ್ರಿಜೇಶ್ ಚೌಟ ರವರ ಮನವಿಯನ್ನು ಪರಿಗಣಿಸಿ ದೆಹಲಿಯಲ್ಲಿ JBF ಪೆಟ್ರೋಕೆಮಿಕಲ್ಸ್‌ ಮತ್ತು GAIL ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ

Suddi Udaya

ಉಜಿರೆ ಎಸ್.ಡಿ.ಎಮ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya
error: Content is protected !!