ಆರಂಬೋಡಿ: ಮುಹಿಯುದ್ಧೀನ್ ಜುಮ್ಮಾ ಮಸೀದಿ ಅಂಗರಕರಿಯ ಇದರ ಅಧೀನದಲ್ಲಿರುವ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ಇದರ ನೇತೃತ್ವದಲ್ಲಿ ಎ.28ರಂದು ಒಟ್ಟು 11 ಮಕ್ಕಳ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮವನ್ನು ನಡೆಸಲಾಯಿತು.
ಮಸೀದಿ ಅಧ್ಯಕ್ಷ ಹಾಜಿ ಜಿ.ಎಮ್. ನಝೀಮುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಸ್ಸಯ್ಯೆದ್ ಅಕ್ರಮ್ ಅಲಿ ತಙಳ್ ಅಂಗರಕರಿಯ ದುವಾ ಹಾಗೂ ಹಿತವಚನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆಂದ್ರ ಕಮಿಟಿ ಪ್ರ. ಕಾರ್ಯದರ್ಶಿ ಎ.ಎಂ. ರಿಯಾಝ್ ಸ್ವಾಗತಿಸಿದರು. ಮುಹಿಯುದ್ಧೀನ್ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಆಲಿಯಬ್ಬ ಯೆಂಗ್ ಮೆನ್ಸ್ ಕಾರ್ಯ ಚಟುವಟಿಕೆಯ ಬಗ್ಗೆ ಶ್ಲಾಘಿಸಿದರು.
ವೇದಿಕೆಯಲ್ಲಿ ಅಲ್ ಗೌಸಿಯ ಅಧ್ಯಕ್ಷರಾದ ಮುಹಮ್ಮದ್ ಶರೀಫ್, ಜಮಾಅತಿನ ಹಿರಿಯರಾದ ಮುಹಮ್ಮದ್ ಕುಞ, ಎಂ.ಜೆ.ಎಂ. ಹೊಕ್ಕಾಡಿ ಕಾರ್ಯದರ್ಶಿ ಅಲ್ತಾಫ್ ಹಾಗೂ ಮುತ್ತಲಿಬ್ ಫ್ಯೆಝಿ ಉಪಸ್ಥಿತರಿದ್ದರು. ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಮುಸ್ತಫ, ಕಾರ್ಯದರ್ಶಿ ಷರೀಫ್ ಅಲ್ ಗೌಸಿಯ, ಕಾರ್ಯದರ್ಶಿ ರಿಝ್ವಾನ್, ಅಲ್ ಗೌಸಿಯ ಸದಸ್ಯರು, ಜಮಾಅತ್ ಬಾಂಧವರು, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.
ಒಟ್ಟು 11 ಮಕ್ಕಳ ಸುನ್ನತ್ ಕಾರ್ಯ ನಿರ್ವಹಿಸಿದ ಡಾ| ಇ.ಕೆ ಸಿದ್ಧೀಕ್ ಅಡ್ಡೂರ್ ಇವರಿಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.