ಬೆಳ್ತಂಗಡಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಕಳೆದ 38 ವರ್ಷಗಳಿಂದ ಹಲವು ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಿಸಿದ ಉಪ ವಲಯಾರಣ್ಯಧಿಕಾರಿ ಕುಶಾಲಪ್ಪ ಗೌಡರವರು ಎ.30 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಕುಶಾಲಪ್ಪ ಗೌಡರವರು 1986 ಜೂನ್ ತಿಂಗಳಲ್ಲಿ ಅರಣ್ಯ ವೀಕ್ಷಕರಾಗಿ ಹೆಬ್ರಿ ವಲಯದಲ್ಲಿ ಸೇರ್ಪೆಡೆಗೊಂಡು ನಂತರ ಹಂತ ಹಂತವಾಗಿ ಮುಂಭಡ್ತಿಗೊಂಡು ಉಪವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ 2024 ಎಪ್ರಿಲ್ 30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಹೆಬ್ರಿ, ಶಂಕರನಾರಾಯಣ, ಅರಣ್ಯ ರಕ್ಷಕ ತರಬೇತಿ ಶಾಲೆ ಮಡಿಕೇರಿ ಕುಶಾಲನಗರ, ಕುದುರೆಮುಖ ರಾಷ್ಟ್ರೀಯ ಉದ್ಯನವನ ಬೆಳ್ತಂಗಡಿ ವನ್ಯಜೀವಿ ವಿಭಾಗ, ಹೆಬ್ರಿ ವಲಯ ಪೆರ್ಡೂರು, ಕುಕ್ಕೆಹಳ್ಳಿ, ಪ್ರಸ್ತುತ 2021 ರಿಂದ ವೇಣೂರು ಅರಣ್ಯ ವಲಯದಲ್ಲಿ ಉಪ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಒರ್ವ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಇವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸಮ್ಮಾನಗಳು ದೊರಕಿದೆ.
ಮೂಲತ ಸುಳ್ಯ ತಾಲೂಕಿನ ಕೊಡಿಯಾಳ ಗ್ರಾಮದ ಕಲ್ಪಡ ನಿವಾಸಿಯಾಗಿ ಪತ್ನಿ ಟಿ. ತಾರದೇವಿ ಮತ್ತು ಇಬ್ಬರು ಪುತ್ರಿಯರಾದ ವಿದ್ಯಾಶ್ರೀ ಮತ್ತು ಭವ್ಯಶ್ರೀ ಅವರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.