ಉಜಿರೆ: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪಟ್ಟಣಗಳಿಗೆ ಸೀಮಿತವಾದ ಬೆನಕ ಆಸ್ಪತ್ರೆಯ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗ ಮತ್ತು ಸಿ.ಟಿ.ಸ್ಕ್ಯಾನಿಂಗ್ ಸೇವೆಯು ಎ.30ರಂದು ಶುಭಾರಂಭಗೊಂಡಿದೆ.
ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟಿಸಿ ಶುಭಹಾರೈಸಿದರು.
ಅಧ್ಯಕ್ಷತೆಯನ್ನು ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಭಟ್ ವಹಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರಿನ ಖ್ಯಾತ ರೇಡಿಯೊಲಾಗಿಸ್ಟ್ ಹಾಗೂ ಬಲ್ಮಠ ಡಯಾಗ್ನಿಸ್ಟಿಕ್ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪನಾ ನಿರ್ದೇಶಕರಾದ ಡಾ.ಅತೀಂದ್ರ ಭಟ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹಿರಿಯರಾದ ಸೀತರಾಮ್ ಭಟ್, ಡಾ.ಭಾರತಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್, ಪ್ರಮುಖರಾದ ಡಾ.ಪ್ರದೀಪ್ ಕುಮಾರ್, ಅನಂತ್ ಭಟ್ ಮಚ್ಚಿಮಲೆ, ಡಾ.ಎಂ.ಎಂ ದಯಾಕರ್, ಸೀತರಾಮ ತೋಳ್ಪಡಿತ್ತಾಯ, ಡಾ.ಜಯಕುಮಾರ್ ಶೆಟ್ಟಿ, ವಿನಾಯಕ್ ರಾವ್, ಬ್ಯಾಂಕ್ ಬರೋಡದ ಪ್ರಬಂಧಕ ಸುಖೇಶ್ ಹಾಗೂ ವೈದ್ಯರು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
ಎಸ್.ಜಿ ಭಟ್ ಸ್ವಾಗತಿಸಿದರು, ಡಾ.ಅಂಕಿತಾ ಭಟ್ ಪ್ರಾರ್ಥಿಸಿದರು.