ಭೂಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಲಾಯಿಲ ನಿವಾಸಿ ಗಣೇಶ್ ಬಿ.ಎಲ್ ಮೇ.2 ರಂದು ಸೇವಾ ನಿವೃತ್ತಿ

Suddi Udaya

Updated on:

ಬೆಳ್ತಂಗಡಿ: ಸುಮಾರು 21 ವರ್ಷಗಳ ಕಾಲ ಸೈನಿಕರಾಗಿ ದೇಶ ಸೇವೆ ಸಲ್ಲಿಸಿ ಮೇ 2ರಂದು ನಿವೃತ್ತಿಗೊಳ್ಳಲಿರುವ ಲಾಯಿಲ ನಿವಾಸಿ ಗಣೇಶ್ ಬಿ.ಎಲ್ ರವರು ಮೇ.2 ರಂದು ನಿವೃತ್ತರಾಗಿ ಮೇ.4 ಕ್ಕೆ ಬೆಳ್ತಂಗಡಿಗೆ ಆಗಮಿಸಲಿದ್ದಾರೆ.

ಗಣೇಶ್ ಬಿ.ಎಲ್ ರವರು ಡಿಸೆಂಬರ್ 05 2002 ರಲ್ಲಿ ಭಾರತೀಯ ಗಡಿ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಇರುವ ಭಾರತೀಯ ಗಡಿ ರಕ್ಷಣಾ ಪಡೆಗೆ ಸೈನಿಕನಾಗಿ ಸೇರಿಕೊಂಡು ಭಾರತ ಮತ್ತು ಪಾಕಿಸ್ಥಾನದ ಗಡಿ ಪ್ರದೇಶವಾದ ಪಂಜಾಬ್, ರಾಜಸ್ಥಾನ, ಅಸ್ಲಾಂ, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಉತ್ತರ ಪ್ರದೇಶ, ಮಣಿಪುರ, ದಿಲ್ಲಿ ಮತ್ತು ಬೆಂಗಳೂರು ಇಲ್ಲಿ ತನ್ನ ಕರ್ತವ್ಯ ನಿರ್ವಹಿಸಿದಲ್ಲದೆ, ಬೆಂಗಳೂರಿನ ಭಾರತೀಯ ಗಡಿ ಭದ್ರತಾ ಪಡೆಯ ಸಿಗ್ನಲ್ ಟ್ರೈನಿ ಸ್ಕೂಲ್ ಇದರಲ್ಲಿ ಹವಲ್ದಾರ್ ಇನ್‌ಸ್ಟ್ರಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಂತರ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಯಾಗಿ ಸುಮಾರು 21 ವರ್ಷಗಳ ಕಾಲ ಸೈನಿಕನಾಗಿ ದೇಶ ಸೇವೆ ಸಲ್ಲಿಸಿ ಮೇ 02 ರಂದು ಪಂಜಾಬಿನಲ್ಲಿ ನಿವೃತ್ತಿ ಪಡೆದುಕೊಂಡು ಮೇ 04 ರಂದು ತಾಯಿ ನಾಡು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸ್ವಸ್ತಿಕ್ ಮನೆಯ ಬಿ. ಕೃಷ್ಣಪ್ಪ ನಾಯ್ಕ ಮತ್ತು ಶ್ರೀಮತಿ ವಾರಿಜ .ಕೆ ನಾಯ್ಕ ದಂಪತಿಯ ಪುತ್ರ. ತನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ-ಲಾಯಿಲ ಮತ್ತು ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ಮಾಡಿದ್ದು, ತನ್ನ ಪ್ರೌಢ ಶಿಕ್ಷಣವನ್ನು ಸಂತ ತೆರೆಸಾ ಪ್ರೌಢ ಶಾಲೆಯಲ್ಲಿ, ಇಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಪದವಿಯನ್ನು ಮಂಗಳೂರಿನ ಪ್ರತಿಷ್ಠಿತ ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪೂರೈಸಿರುತ್ತಾರೆ.

ಗಣೇಶ್ ಬಿ.ಎಲ್ ಇವರು ಬೆಳ್ತಂಗಡಿಯ ನೋಟರಿ ನ್ಯಾಯಾವಾದಿ ಹಾಗೂ ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್ ರವರ ಸಹೋದರನಾಗಿದ್ದು, ಕುವೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಅನಿತಾ ಕೆ ಇವರ ಪತಿಯಾಗಿರುತ್ತಾರೆ.

Leave a Comment

error: Content is protected !!