ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ: ಚಂಡಿಕಾ ಹೋಮ, ಪ್ರಸನ್ನಪೂಜೆ, ಪಾದಪೂಜೆ

ಮಿತ್ತಬಾಗಿಲು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಪರಮಾನುಗ್ರಹಪುರಸ್ಸರ ಆಶೀರ್ವಾದಗಳಿಂದ ತತ್ಕರ ಕಮಲ ಸಂಜತರಾದ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿರವರು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಎ.30 ರಂದು ಭೇಟಿ ನೀಡಿ ಚಂಡಿಕಾ ಹೋಮದ ಪೂರ್ಣಾಹುತಿ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರ ಪೂಜೆಯನ್ನು ಮಾಡಿ ಆಶೀರ್ವದಿಸಿದರು.

ಬೆಳಿಗ್ಗೆ ಶ್ರೀ ಚಂಡಿಕಾ ಹೋಮ, ಶ್ರೀ ಜಗದ್ಗುರುಗಳ ಆಗಮನ, ಸ್ವಾಗತ, ಮೆರವಣಿಗೆ, ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಶ್ರೀ ಜಗದ್ಗುತುಗಳಿಂದ ಪ್ರಸನ್ನಪೂಜೆ, ಕ್ಷೇತ್ರದರ್ಶನ, ಧೂಳಿ ಪಾದಪೂಜೆ, ಫಲಸಮರ್ಪಣೆ, , ಪಾದಪೂಜಾ-ಭಿಕ್ಷಾವಂದನೆ ಸೇವೆಗಳು, ಸಮಸ್ತ ಭಕ್ತಜನರಿಗೆ ಶ್ರೀ ಜಗದ್ಗುತುಗಳಿಂದ ಫಲಮಂತ್ರಾಕ್ಷತೆಯು ನಡೆಯಿತು.

ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿಕೆ ಲೋಕೇಶ್ ರಾವ್, ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಸಪ್ಪಗೌಡ ಕಾಂಜಾನು, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯ ಚಂದ್ರ ಸೇನರಬೆಟ್ಟು, ಆಡಳಿತ ಅಧಿಕಾರಿ ಮೋಹನ್ ಬಂಗೇರ, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಕಿಲ್ಲೂರು, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

Related posts

ಆ.24: ಬೆಳ್ತಂಗಡಿ ತೋಟಗಾರಿಕೆ ಇಲಾಖೆ ವತಿಯಿಂದ ಬಂದಾರು ಹಾಗೂ ಮೊಗ್ರು ಗ್ರಾಮದ ರೈತರಿಗೆ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ

Suddi Udaya

ಚೈತನ್ಯ ಕಲಾವಿದರು ಬೈಲೂರು ವತಿಯಿಂದ ದಯಾ ವಿಶೇಷ ಶಾಲೆಯ ಫಾ. ವಿನೋದ್ ಮಸ್ಕರೇನ್ಹಸ್ ರವರಿಗೆ ಸನ್ಮಾನ

Suddi Udaya

ರೆಖ್ಯ: ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆಗಾಲದಲ್ಲಿ ಕುಸಿದು ಬಿದ್ದ ಗುಡ್ಡದ ಮಣ್ಣು ತೆರವು

Suddi Udaya

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಉಜಿರೆ: ಕುಂಜರ್ಪದಲ್ಲಿ 4ನೇ ವರ್ಷದ ದುರ್ಗಾಪೂಜೆ

Suddi Udaya
error: Content is protected !!