
ಕಣಿಯೂರು: ಕಣಿಯೂರು ಗ್ರಾಮದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 40 ವರ್ಷಗಳಿಂದ ನೌಕರರಾಗಿ ,ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ರಘುಪತಿ. ಕೆ ಅನಾಬೆ ಇವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಏ.30ರಂದು ಪದ್ಮುಂಜ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಪದ್ಮುಂಜ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ವಹಿಸಿದರು. ಅಭಿನಂದನಾ ಭಾಷಣವನ್ನು ಪದ್ಮುಂಜ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ನಾರಾಯಣ ಗೌಡ ವಹಿಸಿದರು.

ವೇದಿಕೆಯಲ್ಲಿ ಪದ್ಮುಂಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ, ನಿರ್ದೇಶಕರಾದ ಉದಯ ಭಟ್, ರಾಜೀವ ರೈ, ಕೇಶವ, ಶೀಲಾವತಿ, ವಿನಯಶ್ರೀ, ಉದಯ ಬಿ.ಕೆ, ದಿನೇಶ್ ನಾಯ್ಕ, ಪಿಜಿನ ಮೊಗೇರ, ಸಿಬ್ಬಂದಿಗಳಾದ ಚಿದಾನಂದ ಗೌಡ, ವಿಠ್ಠಲ ನಾಯ್ಕ, ಅಂಕಿತಾ. ಬಿ, ಜ್ಯೋತಿ, ರಾಜವರ್ಮ ಇಂದ್ರ, ಗಣೇಶ್, ರಕ್ಷಿತ್, ವೀರಪ್ಪ , ಬ್ಯಾಂಕಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉದಯ ಬಿ. ಕೆ ನಿರೂಪಿಸಿ, ಅಂಕಿತಾ ಬಿ ಸನ್ಮಾನ ಪತ್ರ ವಾಚಿಸಿದರು. ರಾಜೀವ ರೈ ಧನ್ಯವಾದವಿತ್ತರು.
ಸಂಜೆ ಶ್ರೀ ರಘುಪತಿ ಕೆ ಅನಾಬೆ ಇವರ ಸೇವಾರ್ಥವಾಗಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ ಇವರಿಂದ ಶುಕ್ರನಂದನೆ ಯಕ್ಷಗಾನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.











