ಗುರುವಾಯನಕೆರೆ: ರಾಜಧಾನಿ ಬೆಂಗಳೂರಿನ ನಾಗರಬಾವಿ ಲಗ್ಗೆರೆಯ ಸಮೀಪ ಶ್ರೀ ಸ್ವಸ್ತಿಕ ಜ್ಯೋತಿಷ್ಯಾಲಯ ಶಾಖೆಯನ್ನು ಪ್ರಖ್ಯಾತ ನಾಡೋಜ ಡಾ.ಹಂಪನಾ ನಾಗರಾಜ ಹಾಗೂ ಸಮಾಜ ಸೇವಕ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್ ಮತ್ತು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಜ್ಯೋತಿಷ್ಯ ಪಂಡಿತರಾದ ಬಿ.ಕೆ.ಸುಬಾಷ್ ಚಂದ್ರ ಜೈನ್ ರವರು ಹಲವಾರು ಸಮಾಜದ ಗಣ್ಯ ಮುಖಂಡರ ಉಪಸ್ಥಿತಿಯಲ್ಲಿ ಸರಳವಾಗಿ ಮೇ.02ರಂದು ಉದ್ಘಾಟನೆಗೊಂಡಿತು.
ಡಿಜಿಟಲ್ ಯುಗದ ಈ ದಿನಗಳಲ್ಲಿಯೂ ಕೂಡ ಜ್ಯೋತಿಷ್ಯ ಶಾಸ್ತ್ರ ಸಾರ್ವಜನಿಕ ಜನರ ಜೀವನದ ಒಂದು ಪ್ರಮುಖ ಅಂಗವಾಗಿದ್ದು, ಇದರ ಸದುಪಯೋಗವನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆ ಉಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಲಿ ಹಾಗೂ ಜ್ಯೋತಿಷ್ಯವನ್ನು ನಂಬಿ ಬರುವ ಬಂಧುಗಳಿಗೆ ಜ್ಯೋತಿಷ್ಯ ಪಂಡಿತರಾದ ಬಿಕೆ ಸುಬಾಷ್ ಚಂದ್ರ ಜೈನ್ ರವರು ಸದಾ ಹಸನ್ಮುಖ ಮತ್ತು ನೇರನುಡಿಯ ಮುಖಾಂತರ ಎಲ್ಲರ ಮನೆ ಮಾತಾಗಿರಲಿ ಎಂದು ನಾಡೋಜ ಹಂಪನಾ ರವರು ತಿಳಿಸಿದರು.
ಮುಖ್ಯ ಅತಿಥಿ ಸಾಮಾಜಿಕ ಹೋರಾಟಗಾರ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್ ಮಾತನಾಡುತ್ತಾ ಸರಳ ಸ್ವಭಾವದ ಜ್ಯೋತಿಷಿ ಪಂಡಿತ ಬಿಕೆ ಸುಬಾಷ್ ಚಂದ್ರ ಜೈನ್ ರವರು ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಹಲವಾರು ದೀನದಲಿತ ಬಂಧು ಬಳಗದವರಿಗೆ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಮಾಡಿ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದು ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಅಭಿರುಚಿ ಹೊಂದಿದ್ದ ಶ್ರೀಯುತರು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದು ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ತಮ್ಮ ಜ್ಯೋತಿಷ್ಯ ಕೇಂದ್ರದ ಮುಖಾಂತರ ಹೆಸರುವಾಸಿಯಾಗಿದ್ದು, ಈ ದಿನ ಬೆಂಗಳೂರಿನಲ್ಲಿ ಅಪಾರ ಬಂಧು ಮಿತ್ರರ ಅಪೇಕ್ಷೆಯ ಮೇರೆಗೆ ನೂತನ ಶಾಖೆಯ ಶುಭಾರಂಭಗೊಂಡಿದೆ.