23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಬಿ.ಎಸ್.ಎಫ್ ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಗಣೇಶ್ ಬಿ.ಎಲ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

ಬೆಳ್ತಂಗಡಿ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ಬೆಳ್ತಂಗಡಿಯ ಗಣೇಶ್ ಬಿ.ಎಲ್. ಇವರು ಮೇ 2ರಂದು ನಿವೃತ್ತಿಯಾಗಿದ್ದು ಇಂದು (ಮೇ4) ಹುಟ್ಟೂರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದಿಂದ ಮೆರವಣಿಗೆ ಮೂಲಕ ಅವರ ಲಾಯಿಲ ಮನೆಗೆ ಆಗಮಿಸಿದರು.

ಈ ವೇಳೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮರಾಟಿ ಸೇವಾ ಸಂಘದ ಉಮೇಶ್ ಕೇಲ್ತಡ್ಕ, ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಲಯದ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ಇವರ ಸೇವೆ ಬಗ್ಗೆ ಮಾತನಾಡಿ ಶುಭ ಕೋರಿದರು.

ನಿವೃತ್ತ ಯೋಧ ಗಣೇಶ್ ಬಿ.ಎಲ್ ಮಾತನಾಡಿ ಸೈನಿಕರಿಗೆ ನೀಡಿರುವ ಇಂತಹ ಗೌರವಕ್ಕೆ ಅಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ, ನೋಟರಿ ವಕೀಲ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಬಿ.ಎಲ್, ಪದಾಧಿಕಾರಿಗಳು ಮತ್ತು ವಕೀಲರು, ಮರಾಟಿ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕುಟುಂಬ ವರ್ಗದವರು, ನಾಗರಿಕರು ಉಪಸ್ಥಿತರಿದ್ದು ಶುಭ ಕೋರಿದರು.

ಮರಾಟಿ ಸೇವಾ ಸಂಘದ ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ್ ಬಡಕೊಡಿ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಯ್ಯೂರು ಬಜಿಲ ಶಾಲಾ ಕಟ್ಟಡ ದುರಸ್ತಿಗಾಗಿ ಧರ್ಮಸ್ಥಳದಿಂದ 50 ಸಾವಿರ ದೇಣಿಗೆ

Suddi Udaya

ಮಿತ್ತಬಾಗಿಲು ಚೌಕಿಬೆಟ್ಟು ನಿವಾಸಿ ತನಿಯಪ್ಪ ಪೂಜಾರಿ ನಿಧನ

Suddi Udaya

ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ: ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಜಾತ್ರೆ ಪ್ರಯುಕ್ತ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಬ್ರಹ್ಮಕಲಶ ಪೂರ್ವಭಾವಿ ಸಭೆ

Suddi Udaya

ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ವದ ಉದ್ದೇಶ- ಉಜಿರೆಯಲ್ಲಿ ಮೊದಲ ಬಾರಿಗೆಯಶಸ್ವಿಯಾಗಿ ನಡೆದ ರೈನಥಾನ್

Suddi Udaya

ಕೆ.ಎಸ್.ಸಿ.ಎ 14 ವರ್ಷದಲ್ಲಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಲ್ಲಿ ತಾಲೂಕಿನ 6 ವಿದ್ಯಾರ್ಥಿಗಳು ಭಾಗಿ

Suddi Udaya
error: Content is protected !!