25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಾಲಿನಿ ಸೇವಾ ಪ್ರತಿಷ್ಠಾನ ವತಿಯಿಂದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆ

ಬೆಳ್ತಂಗಡಿ: 2011 ಮೇ 3 ರಂದು ದುಷ್ಟರ ಅಟ್ಟಹಾಸ ಕ್ಕೆ ಬಲಿಯಾದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆಯನ್ನು ಶಾಲಿನಿ ಸೇವಾ ಪ್ರತಿಷ್ಠಾನದ ವತಿಯಿಂದ ಆಚರಿಸಲಾಯಿತು.

ಗರ್ಡಾಡಿ ಗುಜ್ಜೋಟ್ಟು ನಲ್ಲಿ ಭಾವಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸೇವಾ ರೂಪವಾಗಿ ಬೆಳ್ತಂಗಡಿ ಕೊಯ್ಯೂರಿನಲ್ಲಿರುವ ವಿಮುಕ್ತಿ ಬುದ್ಧಿಮಾಂದ್ಯ ಮಕ್ಕಳ ಕೇಂದ್ರಕ್ಕೆ ಭೇಟಿಕೊಟ್ಟು ಮಕ್ಕಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಡಲಾಯಿತು.

ಅಲ್ಲಿಯ ಗುರುಗಳು ಶಾಲಿನಿ ಸೇವಾ ಪ್ರತಿಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇನ್ನು ಮುಂದೆಯೂ ನಿಮ್ಮ ಸಮಾಜ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಿನಿ ಸೇವಾ ಪ್ರತಿಷ್ಠಾನದ ಸಂಚಾಲಕರಾದ ತಾರಾನಾಥ ಶೆಟ್ಟಿ, ಶ್ರೀಮತಿ ಜಯಶ್ರೀ ಶೆಟ್ಟಿ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Related posts

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya

ನಾಲ್ಕೂರು:ಪಿಯುಸಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದ ಪ್ರಾಣೇಶ್ ಶೆಟ್ಟಿಯವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಎಂ.ಆರ್ ಡ್ರೆಸ್ಸಸ್ ನಲ್ಲಿ ಕ್ಲಿಯರೆನ್ಸ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ. 30 ರಷ್ಟು ರಿಯಾಯಿತಿ

Suddi Udaya

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

Suddi Udaya

ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!