24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ

ಉಜಿರೆ: ಉದ್ಯಮಿಗಳು ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ಈ ಕನಸುಗಳು ನನಸಾಗಿಸಲು ಸಮಯ ಬೇಕು, ಅವಸರ ಮಾಡಬಾರದು, ತಾಳ್ಮೆ ಇರಬೇಕು, ನೀವು ಕಂಡ ಕನಸುಗಳು ನಿಮ್ಮನ್ನು ಬೆಳಸಲು ಸಹಕಾರಿಯಾಗುತ್ತದೆ. ನಿಮ್ಮ ಬದುಕಿನಲ್ಲಿ ಕಷ್ಟಗಳು ಬಂದಾಗ ಅದನ್ನು ಸಾವಾಲಾಗಿ ಸ್ವೀಕರಿಸಬೇಕು. ದುಂದು ವೆಚ್ಚಗಳಿಂದ ಮತ್ತು ದುಶ್ಚಟಗಳಿಂದ ದೂರ ಇರಬೇಕು. ನಿಮಗೆ ನೀವು ಮಾಡುವ ಸಾಧನೆಗಳೆ ಮುಖ್ಯವಾಗಿರಬೇಕು. ರುಡ್‌ಸೆಟ್ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವ ಉದ್ಯೋಗವನ್ನು ಮಾಡಿ ಉದ್ಯಮಿಗಳಾಗಿರುವುದು ತುಂಬಾ ಸಂತೋಷ ಕೊಟ್ಟಿದೆ ಎಂದು ‘ಬದುಕು ಕಟ್ಟೋಣ ಬನ್ನಿ’ ಇದರ ಸಂಚಾಲಕರು ಮತ್ತು ಉದ್ಯಮಿಗಳು ಆದ ಮೋಹನ್ ಕುಮಾರ್ ರವರು ಭಾಗವಹಿಸಿ ಶಿಬಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಮೊಬೈಲ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಛೇರಿ ಸಹಾಯಕರಾದ ಶ್ರೀಮತಿ ರಶ್ಮಿರವರು ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 27 ಯುವಕರು ಭಾಗವಹಿಸಿದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related posts

ಬಿಜೆಪಿ ರೆಖ್ಯ ಗ್ರಾಮದ ಶಕ್ತಿ ಕೇಂದ್ರ ಪ್ರಮುಖ್ ರಾಗಿ ಚೇತನ್ ಕುಮಾರ್ ಆಯ್ಕೆ

Suddi Udaya

ಬೆಳ್ತಂಗಡಿ ಸ.ಪ್ರ. ದರ್ಜೆ ಕಾಲೇಜಿನಲ್ಲಿ “ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ” ಎಂಬ ವಿಷಯದ ಕುರಿತು ಕಾರ್ಯಾಗಾರ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 98.50 ಫಲಿತಾಂಶ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ರೇಷ್ಮೆರೋಡ್ ಶಕ್ತಿ ಯುವಕ ಮಂಡಲದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಪ್ರಯುಕ್ತ ಭೂಮಿ ಪೂಜೆ

Suddi Udaya
error: Content is protected !!