32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪoತ: ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ಮಳಿಗೆ ಶುಭಾರಂಭ

ತಣ್ಣೀರುಪoತ : ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ವ್ಯಾಪಾರದ ಮಳಿಗೆ ಮೇ 06 ರಂದು ತಣ್ಣೀರುಪoತ ಗ್ರಾಮದ ಕಲ್ಲೇರಿ ಮುಖ್ಯರಸ್ತೆಯ ಮಾತೃಛಾಯ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ,ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ನೇತ್ರಾವತಿ ಹೋಟೆಲ್ ಮಾಲಕರಾದ ಧರ್ಣಪ್ಪ ಗೌಡ, ತಣ್ಣೀರುಪoತ ಗ್ರಾಮ ಪಂಚಾಯತ್ ಸದಸ್ಯರಾದ ಅಯೂಬ್ ಕರಾಯ, ಸೀತಾರಾಮ ಮಡಿವಾಳ, ಯಶೋಧರ ಶೆಟ್ಟಿ, ಹಾಗೂ ಶ್ರೀ ಮಾತಾ ಸುಪಾರಿ ಟ್ರೇಡರ್ಸ್ ಮಾಲಕರಾದ ಸಚಿನ್ ಗೌಡ, ಶ್ರೀದೇವಿ ಸುಪಾರಿ ಟ್ರೇಡರ್ಸ್ ಮಾಲಕರಾದ ಪ್ರಶಾಂತ್ ಶೆಟ್ಟಿ ಮುಡಾಯೂರು, ಶಾರದಾ ರೈ ಮುಗೆರೋಡಿ, ಅಣ್ಣಿ ಶೆಟ್ಟಿ ಪಣೆಕ್ಕರ, ರಾಜೇಶ್ ಶೆಟ್ಟಿ ನವಶಕ್ತಿ ಉಪಸ್ಥಿತರಿದ್ದು, ಶುಭ ಹಾರೈಸಿದರು.


ನರಸಿಂಹ ಶೆಟ್ಟಿ, ಮತ್ತು ಮನೆಯವರು ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು.
ಅಂಗಡಿ ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ಸ್ವಾಗತಿಸಿದರು. ಕಟ್ಟಡ ಮಾಲಿಕರಾದ ಕೃಷ್ಣಪ್ಪ ಪೂಜಾರಿ ಧನ್ಯವಾದವಿತ್ತರು.


ಅಡಿಕೆ, ಗೇರುಬೀಜ, ತೆಂಗಿನಕಾಯಿ, ಕಾಳುಮೆಣಸು, ಮುಂತಾದ ಕಾಡುತ್ಪತಿಗಳನ್ನು ಖರೀದಿಸಲಾಗುವುದು ಎಂದು ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ತಿಳಿಸಿದರು.

Related posts

ಕಾರ್ಯಕ್ರಮ ನಿರೂಪಕ ಅರುಣ್ ಗರ್ಡಾಡಿ ಅಸೌಖ್ಯದಿಂದ ನಿಧನ

Suddi Udaya

ಉಜಿರೆ: ದ.ಕ ಜಿಲ್ಲಾ ಮಟ್ಟದ ಶ್ರೀ ಮದ್ಭಗವದ್ಗೀತಾ ಸ್ಪರ್ಧೆಗಳ ಉದ್ಘಾಟನೆ

Suddi Udaya

ಸವಣಾಲು: ಸಾಂತಪ್ಪ ಮಲೆಕುಡಿಯ ನಿಧನ

Suddi Udaya

ಪೆರೋಡಿತ್ತಾಯಕಟ್ಟೆ ಶಾಲೆಗೆ ಬ್ಯಾರಿ ಕೇಡ್ ಕೊಡುಗೆ

Suddi Udaya

ಪಡಂಗಡಿ: 6ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ: ಲೀಟರ್ ಗೆ 2 ರೂ ಹೆಚ್ಚಳ

Suddi Udaya
error: Content is protected !!