23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರ ಗಾಯ, ನೆರವಿನ ನಿರೀಕ್ಷೆಯಲ್ಲಿ ಶಿರ್ಲಾಲುವಿನ ಬಡ ಕುಟುಂಬ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಬೈಲಡ್ಕ ನಿವಾಸಿ ಲಲಿತಾರವರ ಪತಿ ನಾರಾಯಣ ಮಲೆಕುಡಿಯರವರು ತಮ್ಮ ತೋಟಕ್ಕೆ ಸೊಪ್ಪು ಕಡಿಯುವ ಸಂದರ್ಭದಲ್ಲಿ ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರ ಪ್ರಮಾಣದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ವೆನ್ಸಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಫಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ವೈದ್ಯರು ತಿಳಿಸಿದ್ದು ಆಸ್ಪತ್ರೆಯ ವೈದ್ಯಕೀಯ ಖರ್ಚು ಸುಮಾರು ರೂ.10 ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ.

ಇಗಾಗಲೇ ಚಿಕಿತ್ಸೆಗೆ ಅಲ್ಲಿ ಇಲ್ಲಿ ಸಾಲ ಮಾಡಿದ್ದು ಕುಟುಂಬ ನಿರ್ವಹಣೆಗೆ ಕಷ್ಟ ಸಾಧ್ಯವಾಗಿದೆ. ಇನ್ನೂ 10 ಲಕ್ಷ ಆಸ್ಪತ್ರೆ ವೆಚ್ಚ ಭರಿಸಲು ಅಸಮರ್ಥರಾಗಿರುವ ಈ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ಇಬ್ಬರು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನಾರಾಯಣ ಮಲೆಕುಡಿಯರವರು ಈ ಕುಟುಂಬಕ್ಕೆ ಆಧಾರವಾಗಿದ್ದು ಈ ಸಮಸ್ಯಯಿಂದ ಕುಟುಂಬದ ಆಧಾರಸ್ತಂಭ ಕುಸಿದಂತಾಗಿದೆ. ಈ ಕುಟುಂಬಕ್ಕೆ ಸಹಾಯಧನ ನೀಡಿ ಆಧಾರವಾಗಲು ಇಚ್ಚಿಸುವ ವ್ಯಕ್ತಿಗಳು ಅವರ ಪತ್ನಿಯ ಬ್ಯಾಂಕ್ ಅಕೌಂಟ್ ಗೆ ಅಥವಾ ಸ್ಯಾನರ್ ಗೆ ಆರ್ಥಿಕ ನೆರವು ಮಾಡಬಹುದಾಗಿದೆ.

Name:- Lalitha
A/c no:- 8715119001062
IFSC code:- CNRB0008715
Canara bank branch ಶಿರ್ಲಾಲು

ಸಂಪರ್ಕ ಸಂಖ್ಯೆ : 94813 61918 ಲಲಿತಾ (ಇವರ ಪತ್ನಿ)
ದಯವಿಟ್ಟು ಈ ಬಡ ಕುಟುಂಬಕ್ಕೆ ಧನ ಸಹಾಯ ಮಾಡುವ ಮೂಲಕ ಸಹಕಾರ ನೀಡಿ.

Related posts

ಫೆ.12ರಿಂದ ಮರೋಡಿ ಕ್ಷೇತ್ರದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ಮೊಬೈಲ್ ಅಸೋಸಿಯೇಶನ್ ನಿಂದ ಲಕ್ಕಿ ಕೂಪನ್ ಡ್ರಾ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

Suddi Udaya

ಕರಾಟೆ ಪಂದ್ಯಾಟ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿ ಚರಣ್ ಜೈನ್ ಬಂಗಾಡಿ ಪ್ರಥಮ ಸ್ಥಾನ

Suddi Udaya

ಫೆ. 2 : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಸಂಗ್ರಾಮ್; ಉದ್ಯೋಗ ಖಾತ್ರಿ ಯೋಜನೆಯ ಬಚಾವ್‌ ಆಂದೋಲನ: ಪ್ರದೀಪ್ ಈಶ್ವರ್ ಭಾಗಿ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ

Suddi Udaya
error: Content is protected !!