27.8 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ರವರು ಮನುಶ್ರೀ ದತ್ತಿ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಮನೋಹರಿ ಪಾರ್ಥ ಸಾರಥಿ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿಯ ತೆಂಕಕಾರಂದೂರಿನ ಪ. ರಾಮಕೃಷ್ಣ ಶಾಸ್ತ್ರಿ ಅವರು ವೃತ್ತಿಯಲ್ಲಿ ಕೃಷಿಕರು, ಪ್ರವೃತ್ತಿಯಲ್ಲಿ ಸಾಹಿತಿ. ತುಳು ಮತ್ತು ಕನ್ನಡದಲ್ಲಿ ಕಥೆ-ಕಾದಂಬರಿಗಳನ್ನು ಬರೆದಿರುವ ಅವರು ವಿಜ್ಞಾನ, ಅಧ್ಯಾತ್ಮ ವೈಚಾರಿಕ ಕ್ಷೇತ್ರಗಳಲ್ಲೂ ಲೇಖನ ಬರೆದಿದ್ದಾರೆ. ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಗಮಕ ವಾಚನದಲ್ಲಿಯೂ ಪ್ರಸಿದ್ಧರು. ಅವರ ಬರಹಗಳು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಮತ್ತು ಮಂಗಳೂರು ವಿವಿ ಯ ಪದವಿ ತರಗತಿಗಳಿಗೆ ಪಠ್ಯವಾಗಿದ್ದು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಡ್

Suddi Udaya

ಉಜಿರೆ: ಶ್ರೀ ಮಾತಾ ಮೆಸ್ ಡೇ ಕಾರ್ಯಕ್ರಮ

Suddi Udaya

ಡಿ.26 ವಿದ್ಯುತ್ ನಿಲುಗಡೆ

Suddi Udaya

ಪುಂಜಾಲಕಟ್ಟೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಸಾಧಕ 10 ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ

Suddi Udaya

ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya
error: Content is protected !!