September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಸಜ್ಜನಿಕ ನಡೆ, ಸಂಘರ್ಷದ ಹೋರಾಟ, ಸೌಜನ್ಯಯುತ ರಾಯಭಾರಿತ್ವ ಹೊಂದಿದ ಅಪರೂಪದ ರಾಜಕಾರಣಿ ವಸಂತ ಬಂಗೇರ – ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿ ರಾಜಕಾರಣದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿರುವ ವಸಂತ ಬಂಗೇರ ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷದ ಬೆಂಬಲದಿಂದ ಯಡಿಯೂರಪ್ಪ ಜೊತೆ, ಜೊತೆಗೆ ಶಾಸಕರಾಗಿ, ಬೆಳ್ತಂಗಡಿಯಲ್ಲಿ ಭಾಜಪವನ್ನು ಕಟ್ಟಿ ಬೆಳೆಸಿದವರು.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಲ್ಲಿ ಶಾಸಕರಾಗುವುದು ರಾಜಕೀಯ ವ್ಯಕ್ತಿಗೆ ಸುಲಭವಲ್ಲ, ಆದರೆ ಬಂಗೇರರು ಮೂರು ಪಕ್ಷಗಳಿಂದ ಸ್ಪರ್ಧಿಸಿ ಶಾಸಕರಾಗಿ ಬೆಳ್ತಂಗಡಿ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವುದರ ಜೊತೆಗೆ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ, ೧೯೮೩-೮೫ರ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಮಂಗನ ಖಾಯಿಲೆಯಿಂದ ತತ್ತರಿಸಿದಾಗ ಮಿಡಿದ ಅವರ ಸಹೃದಯಿ ಮನ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಅವರು ನಡೆಸಿದ ಜಾಥಾ ಇಂದಿಗೂ ಜನತೆಯ ಮನದಲ್ಲಿ ಹಚ್ಚ ಹಸಿರು. ಅವರ ನಿಧನ ವೈಯಕ್ತಿಕವಾಗಿಯೂ ತಾಲೂಕಿನ ಜನತೆಗೂ ಅಪಾರ ದುಃಖವನ್ನು ತಂದಿದ್ದು, ದಿವಂಗತರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ತನ್ನ ನುಡಿನಮನ ಸಲ್ಲಿಸಿರುತ್ತಾರೆ.

Related posts

ಉಜಿರೆ ಅನುಗ್ರಹ ಶಾಲಾ ಪ್ರಾರಂಭೋತ್ಸವ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಕೊಂಕನ್ ಬೆಲ್ಸ್ ಕ್ರೀಡಾ ಕೂಟ – ಚಾಂಪಿಯನ್‌ಶಿಪ್ ಚಾಲೆಂಜ್

Suddi Udaya

ನಿವೃತ್ತ ಉಪತಹಶೀಲ್ದಾರ್, ಪ್ರಗತಿಪರ ಕೃಷಿಕ, ನಾಳ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗುಂಡೂರಾವ್ ವಿಧಿವಶ

Suddi Udaya

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Suddi Udaya

ಕಳಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ ಪ್ರೇರಣಾ ಶಿಬಿರ

Suddi Udaya
error: Content is protected !!