September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

ಬೆಳ್ತಂಗಡಿ: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ನಿವೃತ್ತ ಉಪನ್ಯಾಸಕ ಡಾ|ಪಾಲ್ತಾಡಿ ರಾಮಕೃಷ್ಣ ಆಚಾ‌ರ್ (79ವ)ಅವರು ವಿಧಿವಶರಾಗಿದ್ದಾರೆ. ಪೆರುವಾಜೆಯಲ್ಲಿ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಮೇ 7ರಂದು ಸಂಜೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು

.ಮೃತರು ಪತ್ನಿ ಸುಮಾ ಆರ್.ಆಚಾರ್,ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಆಗಿರುವ ಪುತ್ರ ಹರ್ಷವರ್ಧನ, ಪುತ್ರಿಯರಾದ ಕಿರಣ ಪಿ.ಆ‌ರ್.,ಬೆಳ್ಳಾರೆ ಡಾ| ಶಿವರಾಮ ಕಾರಂತ ಪ.ಪೂ.ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸುಪ್ರಿಯಾ ಪಿ.ಆ‌ರ್,ಸೊಸೆ ಸುಧಾ, ಅಳಿಯಂದಿರಾದ ಕೃಷ್ಣ ಎಂ.ಬಿ.,ಜಯಪಾಲ ಹೆಚ್.ಎನ್.ಅವರನ್ನು ಅಗಲಿದ್ದಾರೆ.ಡಾ| ಪಾಲ್ತಾಡಿಯವರ ಮೃತದೇಹವನ್ನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿರಿಸಲಾಗಿದ್ದು ಮೇ 8ರಂದು ಅಂತ್ಯ ಕ್ರಿಯೆ ನಡೆಯಲಿದೆ.

Related posts

ರೋಟರಿ ಕ್ಲಬ್ ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆ

Suddi Udaya

ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಹುದ್ದೆಯಿಂದ ಕೊಕ್ಕಡ ಕೊಲ್ಲಾಜೆ ನಿವಾಸಿ ಪವನ್ ಸಾಲ್ಯಾನ್ ಗೆ ಮುಕ್ತಿ

Suddi Udaya

ನಿಟ್ಟಡೆ: ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ರೂ.70 ಸಾವಿರ ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪು ಕಳವು

Suddi Udaya

ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಚಿಣ್ಣರ ಉತ್ಸವ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya
error: Content is protected !!