September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

ಪುತ್ತೂರು : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಶೋರೂಂಗಳ ವತಿಯಿಂದ ಆಯೋಜಿಸಲಾದ ಡೈಮಂಡ್‌ ಫೆಸ್ಟ್‌ನ ಅಂಗವಾಗಿ ಪುತ್ತೂರು ಶೋರೂಂನಲ್ಲಿ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು.

ಮಾ. 28ರಿಂದ ಮೇ 10ರ ವರೆಗೆ ನಡೆದ ಡೈಮಂಡ್ ಫೆಸ್ಟ್ ಅವಧಿಯಲ್ಲಿ ವಜ್ರಾಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ಆಯ್ಕೆಯಾದ ಅದೃಷ್ಟಶಾಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ಗ್ರಾಹಕರಿಂದ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ಡೈಮಂಡ್ ಫೆಸ್ಟ್ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಲಕ್ಕಿ ಡ್ರಾ ನಡೆಸಿ ವಿಜೇತರನ್ನು ಆಯ್ಕೆ ಮಾಡಿದ ಪುತ್ತೂರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್‌ ನಡುಬೈಲು ಅವರು ಮಾತನಾಡಿ, ನಂಬಿಕೆಗೆ ಇನ್ನೊಂದು ಹೆಸರೇ ಮುಳಿಯವಾಗಿದ್ದು, ಹೀಗಾಗಿ ನಮಗೆ ಸಂಸ್ಥೆಯ ಬಗ್ಗೆ ವಿಶೇಷ ಅಭಿಮಾನದ ಜತೆಗೆ ವಿಶ್ವಾಸವಿದೆ ಎಂದರು.
ಲಕ್ಕಿ ಡ್ರಾದ ಬಂಪರ್ ಬಹುಮಾನವಾದ ಇವಿ ಸ್ಕೂಟರ್ ಅನ್ನು ರಕ್ಷಿತಾ ಪೂಜಾರಿ ಗೆದ್ದುಕೊಂಡರು. ಜತೆಗೆ ಜಾನ್ವಿ ಮನೀಶಿ ಕೊಂಬೆಟ್ಟು ಹಾಗೂ ಅನುಷಾ ವೈ. ಕಾಶಿಬೆಟ್ಟು ಅವರು ಇತರೆ ಪ್ರಮುಖ ಬಹುಮಾನಗಳನ್ನು ಪಡೆದುಕೊಂಡರು.

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ, ನಮ್ಮ ಸಂಸ್ಥೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸ ಮತ್ತು ಪ್ರೀತಿಯೇ ನಮ್ಮ ಬೆಳವಣಿಗೆಯ ಮೂಲಾಧಾರ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಭರಣಗಳ ಜತೆಗೆ ವಿಶೇಷ ಖರೀದಿ ಅನುಭವವನ್ನು ನೀಡುವ ಉದ್ದೇಶದಿಂದ ಡೈಮಂಡ್ ಫೆಸ್ಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದ ಎಲ್ಲಾ ಗ್ರಾಹಕರಿಗೆ ನಾವು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಪುತ್ತೂರು ಶಾಖಾ ಪ್ರಬಂಧಕರಾದ ರಾಘವೇಂದ್ರ ಪಟೇಲ್ ಮತ್ತು ಬೆಳ್ತಂಗಡಿ ಶಾಖಾ ಪ್ರಬಂಧಕರಾದ ಲೋಹಿತ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಜ್ರಾಭರಣಗಳ ವಿಶೇಷತೆ, ಗುಣಮಟ್ಟ ಹಾಗೂ ಅವುಗಳ ಮೌಲ್ಯದ ಕುರಿತು ವೇಣು ಶರ್ಮಾ ಅವರು ಪ್ರಶೋತ್ತರ ರೂಪದಲ್ಲಿ ಗ್ರಾಹಕರಿಗೆ ಉಪಯುಕ್ತ ಮಾಹಿತಿ ನೀಡಿದರು. ಡೈಮಂಡ್ ಫೆಸ್ಟ್‌ನಲ್ಲಿ ಭಾಗವಹಿಸಿದ ಎಲ್ಲ ಗ್ರಾಹಕರಿಗೂ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಿಬಂದಿ ವರ್ಗಕ್ಕೂ ಸಂಸ್ಥೆಯ ವತಿಯಿಂದ ಕೃತಜ್ಞತೆ ಅರ್ಪಿಸಲಾಯಿತು.

ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಟೇಲ್ ಸ್ವಾಗತಿಸಿದರು. ಆನಂದ್ ಕುಲಾಲ್ ವಂದಿಸಿದರು. ಮೃದುಲ ಅವರು ನಿರೂಪಿಸಿದರು.

Related posts

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಗೈಡ್ ವಿದ್ಯಾರ್ಥಿನಿ ನಿಷ್ಕ ಹೆಗ್ಡೆ ಇವರ ಕೈಚಳಕದಿಂದ ಮೂಡಿದ ಪರಿಸರ ಸ್ನೇಹಿ ಗಣಪತಿ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದವರಿಗೆ ಅಭಿನಂದನೆ

Suddi Udaya

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಅದ್ವಿಕಾ ರವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ

Suddi Udaya

ಭಾರೀ ಮಳೆ; ಮದ್ದಡ್ಕ ಹೋಟೆಲ್ ಗೆ ನುಗ್ಗಿದ ಮಳೆ ನೀರು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಕಸದಿಂದ ರಸ ಸ್ಪರ್ಧೆ

Suddi Udaya

ಶ್ರೀರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹೋಮ

Suddi Udaya
error: Content is protected !!