September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಜಿ ಶಾಸಕ ವಸಂತ ಬಂಗೇರ ವಿಧಿವಶಬಂಗೇರ ಅಭಿಮಾನಿಗಳಿಂದ ಅಂತಿಮ ಸಂಸ್ಕಾರದ ಬಗ್ಗೆ ತುರ್ತು ಸಭೆಸಕಲ ಸರ್ಕಾರಿ ಗೌರವಗಳೊಂದಿಗೆ  ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

ಬೆಳ್ತಂಗಡಿ:ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದು ಗುರುವಾರ ಮುಂಜಾನೆ ಬೆಂಗಳೂರಿನಿಂದ ಚಾರ್ಮಾಡಿ ಮೂಲಕ   ಬೆಳ್ತಂಗಡಿಗೆ ಅವರ ಪಾರ್ಥಿವ ಶರೀರ ಆಗಮಿಸಲಿದ್ದು.   ಬಂಗೇರ ಅಭಿಮಾನಿಗಳಿಂದ ಅಂತಿಮ ಸಂಸ್ಕಾರದ ಬಗ್ಗೆ ತುರ್ತು ಸಭೆಯು ಗುರುನಾರಾಯಣ ಸಭಾ ಭವನದಲ್ಲಿ ನಡೆಯಿತು.

ಬೆಳಿಗ್ಗೆ 10.30 ಗಂಟೆಗೆ ಹಳೇಕೋಟೆ  ಅವರ ಮನೆಯಿಂದ ತಾಲೂಕು ಕ್ರೀಡಾಂಗಣಕ್ಕೆ  ಪಾರ್ಥಿವ ಶರೀರವನ್ನು  ತಂದು   ಸಾರ್ವಜನಿಕರಿಗೆ ತಾಲೂಕು  ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಸಂಜೆ ಬೆಳ್ತಂಗಡಿ ನಗರದಲ್ಲಿ   ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಯು ನಡೆಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ..ನಂತರ    ಅಂತ್ಯ ಸಂಸ್ಕಾರ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ  ನಡೆಯಲಿದೆ . ಮೃತರ ಗೌರವಾರ್ಥ ನಗರದ ಹೋಟೆಲ್ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಅವರ ಅಭಿಮಾನಿಗಳು  ವಿನಂತಿಸಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಮುಖ್ಯ ಮಂತ್ರಿ  ಉಪ ಮುಖ್ಯ ಮಂತ್ರಿ  ಸೇರಿದಂತೆ ಸಚಿವರು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.

Related posts

ಧರ್ಮಸ್ಥಳ ನೇರ್ತನೆಯಲ್ಲಿ ಕಾಡಾನೆ ದಾಳಿ :ಕೃಷಿಗೆ ಹಾನಿ   

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಅಳದಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಎ.26: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: 16 ನಿರ್ದೇಶಕ ಸ್ಥಾನಕ್ಕೆ 41 ಮಂದಿ ಅಭ್ಯರ್ಥಿಗಳ ನಡುವೆ ಸ್ಪರ್ಧೆ

Suddi Udaya

ಕಾಜೂರು‌ ಉರೂಸ್ ಸಮಾರೋಪ

Suddi Udaya
error: Content is protected !!