April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ರಾಜಕಾರಣದ ಗಂಡೆದೆಯ ನಾಯಕ ಮಾಜಿ‌ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ಭಾರತೀಯ ಮಜ್ದೂರು ಸಂಘ ಜಿಲ್ಲಾಧ್ಯಕ್ಷ,ನ್ಯಾಯವಾದಿ ಅನಿಲ್ ಕುಮಾರ್ ರವರಿಂದ ಸಂತಾಪ

ಬೆಳ್ತಂಗಡಿ: ರಾಜ್ಯ ರಾಜಕೀಯದ ಹಿರಿಯ ಮುತ್ಸದ್ದಿ, ದಕ್ಷಿಣ ಕನ್ನಡದ ಅಜಾತಶತ್ರು, ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಅಡಿಪಾಯ ಹಾಕಿದ, ಹಲವು ಮಹತ್ತರ ಯೋಜನೆಗಳನ್ನು ತಂದ, ರಾಜಕಾರಣದಲ್ಲಿ ಮಾದರಿ ವ್ಯಕ್ತಿಯಾಗಿ ಬೆಳೆದು, ಮುಂದಿನ ಯುವ ರಾಜಕಾರಣಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ, ಪ್ರೇರಣಾದಾಯಿಯಾಗಿ, ಆದರ್ಶಪ್ರಾಯಾರಾಗಿ, ನಿಲ್ಲಬಲ್ಲ ನೇರ ನಡೆ ನುಡಿಯ, ಪ್ರಾಮಾಣಿಕ, ಪ್ರಖರ ಮಾತಿನ ಮಲ್ಲ, ಬೆಳ್ತಂಗಡಿಯ ಗಂಡೆದೆಯ ನಾಯಕ ರಾಗಿದ್ದ ಹಿರಿಯರಾದ ಕೆ.ವಸಂತ ಬಂಗೇರ ನಿಧನದ ಸುದ್ದಿ ಅತೀವ ನೋವು ತಂದಿದೆ.

ಬೆಳ್ತಂಗಡಿ ತಾಲೂಕಿಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅವರ ಕೊಡುಗೆ ಅಪಾರ. ಸದಾ ಕ್ರೀಯಾಶೀಲರಾಗಿದ್ದ ಅವರ ನಿಧನ ಬೆಳ್ತಂಗಡಿಗೆ ತುಂಬಲಾರದ ನಷ್ಟ. ಹಿರಿಯರ ಆತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ ಮತ್ತು ಕುಟುಂಬ ವರ್ಗ, ಬಂಧು ಮಿತ್ರರು, ಹಿತೈಷಿಗಳಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಾರತೀಯ ಮಾಜ್ದೂರು ಸಂಘ ದಕ ಜಿಲ್ಲಾಧ್ಯಕ್ಷ, ನ್ಯಾಯವಾದಿ ಅನಿಲ್ ಕುಮಾರ್ ಯು ಸಂತಾಪ ಸೂಚಿಸಿದ್ದಾರೆ.

Related posts

ವಾಣಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ

Suddi Udaya

ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya

ಕಾರಿಂಜ ಮಧ್ವ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೆಳ್ತಂಗಡಿಯ ಯುವಕ ಸ್ಥಳದಲ್ಲೆ ಸಾವು

Suddi Udaya

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya

ಬಾರ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya
error: Content is protected !!