September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಿಂದ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನ

ಬೆಳ್ತಂಗಡಿ: ಜಿಲ್ಲೆಯಲ್ಲಿ ಪ್ರತಿಭಾವಂತ ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6 ನೇ ತರಗತಿಗೆ ದಾಖಲಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೇ 21 ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.


ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯ, ಬಂಟ್ವಾಳ ತಾಲೂಕಿನ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರ, ಮಾಣಿಯಲ್ಲಿರುವ ಬಾಲವಿಕಾಸ, ಆಂಗ್ಲ ಮಾಧ್ಯಮ ಶಾಲೆ, ವಿಟ್ಲದ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಹಳೆಕೋಟೆಯಲ್ಲಿರುವ ವಾಣಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮಡಂತ್ಯಾರುವಿನ ಸೆಕ್ರೇಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ.


ಅರ್ಹತೆ ಹಾಗೂ ಷರತ್ತುಗಳು:
ವಿದ್ಯಾರ್ಥಿಗಳು ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. (ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು), ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.2.50 ಲಕ್ಷಗಳಿಗೆ ಮೀರಿರಬಾರದು. (2023-24 ನೇ ಸಾಲಿನ ಆದಾಯ ಪ್ರಮಾಣ ಪತ್ರ ಲಗತ್ತೀಕರಿಸಬೇಕು), ಜನನ ಪ್ರಮಾಣ ಪತ್ರವನ್ನು ಲಗತ್ತಿಸಿರಬೇಕು. 2 ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಪ್ರತಿಭಾವಂತ ವಿದ್ಯಾರ್ಥಿಯಾಗಿರಬೇಕು. ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಶೇ. 60% ಅಂಕ ಪಡೆದಿರಬೇಕು.


ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಹಾಗೂ ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) ಲಗತ್ತ್ತೀಕರಿಸುವುದು, ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ ಅಂದರೆ, ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸಲಾಗುವುದು. ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕಿಯರಿಗೆ ಅವಕಾಶ ನೀಡುವುದು. ಗರಿಷ್ಠ ರೂ. ೭೫,೦೦೦/- ಶಾಲಾ ಶುಲ್ಕವನ್ನು ಸರಕಾರದಿಂದ ಭರಿಸಲಾಗುವುದು. (ಶಾಲೆಯ ಕಡ್ಡಾಯ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ ಭತ್ಯೆ ಮತ್ತು ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ), ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಪುಸ್ತಕದ ಜೆರಾಕ್ಸ್ ಪ್ರತಿ. ಅಪೂರ್ಣ ಅರ್ಜಿ, ತಡವಾಗಿ ಬಂದ ಅರ್ಜಿ ಹಾಗೂ ನಿಬಂಧನೆಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.


ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಐ.ಟಿ.ಡಿ.ಪಿ. ಕಚೇರಿ, ಅಶೋಕನಗರ ಅಂಚೆ, ಮಂಗಳೂರು-575006 ದೂ.ಸಂಖ್ಯೆ: 0824-2451269 ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಜಿಲ್ಲಾ ಮಟ್ಟದ ಕ್ರೀಡೋತ್ಸವ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Suddi Udaya

ಗಾಳಿ-ಮಳೆ: ಬೃಹತ್ ಮರ ಉರುಳಿ ಬಿದ್ದು, ಅಡಕೆ ಗಿಡಗಳು ಧರಾಶಾಹಿ

Suddi Udaya

ವಾಣಿ ಕಾಲೇಜಿನ ಪರಂಪರಾ ವೇದಿಕೆಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಅಳದಂಗಡಿಯಲ್ಲಿ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಶುಭಾರಂಭ

Suddi Udaya

ಬೆಳ್ತಂಗಡಿ : ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಚಿರತೆ ಮೃತದೇಹ ಪತ್ತೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು ಪರಿಶೀಲನೆ

Suddi Udaya
error: Content is protected !!