April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಳೆಕೋಟೆ ಮನೆಯಲ್ಲಿ ನಡೆದ ಬಂಗೇರರ ಅಂತಿಮ ವಿಧಿ-ವಿಧಾನ: ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶಕ್ಕೆ ಅವಕಾಶ: ವರ್ತಕರಿಂದ ಅಂಗಡಿ-ಮುಂಗಟ್ಟು ಬಂದ್ ಮಾಡಿ ಗೌರವ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ, ನೇರ ನಡೆನುಡಿಯ, ದಿಟ್ಟ ಹೋರಾಟಗಾರ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ನಿನ್ನೆ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಇಂದು ಬೆಳಿಗ್ಗೆ ಹಳೆಕೋಟೆಯ ಅವರ ಮನೆಯಲ್ಲಿ ಜರುಗಿತು.


ಬಳಿಕ ಬೆಳ್ತಂಗಡಿಯ ನಗರದ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ತಾಲೂಕು ಕ್ರೀಡಾಂಗಣದ ತನಕ ನಡೆಯಲಿದೆ. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನ ತನಕ ಅವಕಾಶ ನೀಡಲಾಗಿದ್ದು, ಬೆಳ್ತಂಗಡಿ ನಗರದಲ್ಲಿ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಮಾಜಿ ಶಾಸಕರಿಗೆ ಗೌರವ ಸಲ್ಲಿಸಿದರು. ಸಂಜೆ ವೇಳೆ ಅವರ ಹುಟ್ಟೂರು ಕುವೆಟ್ಟು ಗ್ರಾಮದ ಕೇದೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಅವರ ಮನೆಗೆ ಶಾಸಕ ಹರೀಶ್ ಪೂಂಜ, ರಕ್ಷಿತ್ ಶಿವರಾಂ, ವಸಂತ ಸಾಲಿಯಾನ್, ಪ್ರಶಾಂತ್ ಪ್ರತಿಮಾನಿಲಯ, ಜಯಂತ ಕೋಟ್ಯಾನ್, ಮುಗುಳಿ ನಾರಾಯಣ ರಾವ್, ಜಯವಿಕ್ರಮ್, ಪದ್ಮನಾಭ ಮಾಣಿಂಜ, ನಿತೀಶ್ ಕೋಟ್ಯಾನ್, ಸಂತೋಷ್‌ಕುಮಾರ್ ಕಾಪಿನಡ್ಕ, ಧರಣೇಂದ್ರ ಕುಮಾರ್, ಮನೋಹರ ಇಳಂತಿಲ, ಶೇಖರ ಕುಕ್ಕೇಡಿ, ಯೋಗೀಶ್ ಕುಮಾರ್ ನಡಕರ, ಜೈಸನ್, ರಾಜೇಶ್ ಮೂಡುಕೋಡಿ, ಡಾ.ರಾಜರಾಮ್, ಜಗದೀಶ್ ಡಿ. ರಾಜಶೇಖರ ರೈ, ಚಿದಾನಂದ ಇಡ್ಯ, ಸತೀಶ್ ಕಾಶಿಪಟ್ಣ, ರತ್ನಾಕರ ಬುಣ್ಣನ್, ವಸಂತ ಬಿ.ಕೆ, ಜಯಾನಂದ ಲಾಯಿಲ, ಡಾ.ಜಗನ್ನಾಥ್, ಡಾ. ಸುಧೀರ್ ಪ್ರಭು ಸೇರಿದಂತೆ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಅಳದಂಗಡಿಯಲ್ಲಿ ಮಕ್ಕಳ ಸಮ್ಮೇಳನ: ವಿಜಯ್ ಕುಮಾರ್ ಜೈನ್ ನೇತೃತ್ವದಲ್ಲಿ, ಯಕ್ಷಗಾನ ಸಂಭ್ರಮ,ಕುಣಿತ ಭಜನೆ, ಜನಪದ ಉತ್ಸವ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya
error: Content is protected !!