23.3 C
ಪುತ್ತೂರು, ಬೆಳ್ತಂಗಡಿ
March 7, 2026
ಸಾಧಕರು

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2 ನೇ ರ್ಯಾಂಕ್ ಗಳಿಸಿರುವ ವಿದ್ಯಾರ್ಥಿ ಚಿನ್ಮಯ್ ಜಿ.ಕೆ.ಗೆ ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಸನ್ಮಾನ

ಬೆಳ್ತಂಗಡಿ: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ.ಯನ್ನು ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಇಂದು ಸನ್ಮಾನಿಸಲಾಯಿತು.
ಚಿನ್ಮಯ್ ಜಿ.ಕೆಯ ತಂದೆ ಬೆಳ್ತಂಗಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಗಣೇಶ್ ಭಟ್ ರವರು ಈ ಸಂದರ್ಭದಲ್ಲಿ ಹಾಜರಿದ್ದು, ಮಗನ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಚಿನ್ಮಯ್ ಜಿ.ಕೆ 625 ಕ್ಕೆ 624 ಅಂಕ ಗಳಿಸಿದ್ದು, ಈ ಅಮೋಘ ಸಾಧನೆ ಮಾಡಿದ ರಾಜ್ಯದ ಏಳೇ ಏಳು ಪ್ರತಿಭಾವಂತರಲ್ಲಿ ಒಬ್ಬನಾಗಿದ್ದಾರೆ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾಧನೆ ಗೈದಿದ್ದಾರೆ. ಚಿನ್ಮಯ್ ಜಿ.ಕೆ ಪ್ರಸ್ತುತ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ಪಡೆದುಕೊಳ್ಳುತ್ತಿದ್ದು, ಅಲ್ಲಿನ ಎಕ್ಸ್‌ಪರ್ಟೈಜ್ ಟೆಸ್ಟ್‌ಗಳಲ್ಲಿಯೂ ನಿರಂತರವಾಗಿ “ಸ್ಟಾರ್ ಪರ್ಫಾರ್ಮರ್” ಆಗಿ ಹೊರಹೊಮ್ಮಿರುವುದು ವಿಶೇಷ. ಚಿನ್ಮಯ್ ಜಿ.ಕೆ ಜೆ.ಇ.ಇ ಅಡ್ವಾನ್ಸ್ ನಲ್ಲಿ ಅರ್ಹತೆ ಗಿಟ್ಟಿಸಿಕೊಂಡು ಐ.ಐ.ಟಿ. ಗೆ ಪ್ರವೇಶ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಖಜಾಂಜಿ ಎಂ.ಕೆ ಕಾಶಿನಾಥ್ ರವರು ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಯೊಂದಿಗೆ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ವಿದ್ಯಾರ್ಥಿಗಳಾದ 617 ಅಂಕಗಳಿಸಿದ ಅಜಿತ್ ಎಚ್.ಸಿ, 613 ಅಂಕಗಳಿಸಿರುವ ಸಿಮ್ರಾ ಪರ್ವೀನ್, 602 ಅಂಕ ಗಳಿಸಿರುವ ದ್ರವೀಣ್ ಭಟ್, ಹಾಗೂ 597 ಅಂಕಗಳಿಸಿರುವ ಯಶಸ್ವಿನಿ ಜೆ.ಬಿ ಯವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು .

Related posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ: ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಬಳಂಜ ಸನ್ಮಾನ ಸ್ವೀಕಾರ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿoಜೆ ರವರಿಗೆ ಸನ್ಮಾನ

Suddi Udaya

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

Suddi Udaya

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರು
ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಗೌರವ ಪ್ರಶಸ್ತಿ ಗೆ ಆಯ್ಕೆ

Suddi Udaya

ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರರಾದ ಕೊಕ್ಕಡದ ಶ್ರೀಧರ ಗೌಡ ಕೆಂಗುಡೇಲುರವರಿಗೆ “ವಿಕ ಹಿರೋಸ್” ಪ್ರಶಸ್ತಿ

Suddi Udaya

ಗೇರುಕಟ್ಟೆ :ಪರಪ್ಪು ಹಿದಾಯತುಸ್ಪಿಬಿಯಾನ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Suddi Udaya
error: Content is protected !!