ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಹೊಂದಿರುವ ನಾಡಿನ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿರುವ ಕಾಜೂರು ಇಂದು ಶೈಕ್ಷಣಿಕ ಪ್ರಗತಿಯ ಹಾದಿಯಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು, ಇಲ್ಲಿನ ಮಹಿಳಾ ಪ.ಪೂ ಕಾಲೇಜು ಹಾಗೂ ಶರೀಅತ್ ಕಲಿಯುತ್ತಿರುವ ವಿದ್ಯಾರ್ಥಿಗಳ ದ್ವಿತೀಯ ವರ್ಷದ ಪದವಿ ಪ್ರದಾನ (ಸನದುದಾನ) ಕಾರ್ಯಕ್ರಮ ಸಂಪನ್ನಗೊಂಡಿತು.
ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ನೇತೃತ್ವ ಮತ್ತು ಪದವಿ ಪ್ರಧಾನ ಭಾಷಣವನ್ನು ಕಾಜೂರಿನ ಪ್ರಧಾನ ಧರ್ಮಗುರುಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ನೆರವೇರಿಸಿದರು.
ಉದ್ಘಾಟನೆಯನ್ನು ಕೆ.ಎಮ್ ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿದ್ದ ವಕ್ಪ್ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷ ಎ.ಕೆ ಜಮಾಲ್, ಗುರುವಾಯನಕೆರೆ ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ದಾರುಸ್ಸಲಾಂ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಸಂದರ್ಭೋಚಿತವಾಗಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಹಿರಿಯ ವಿದ್ವಾಂಸ, ಕರ್ನಾಟಕ ಕೇಂದ್ರ ಮುಶಾವರ ಸದಸ್ಯರುಗಳಾದ ಬಿ.ಹೆಚ್ ಅಬೂಸ್ವಾಲಿಹ್ ಮದನಿ ಕಿಲ್ಲೂರು ಮತ್ತು ಕೆ.ಎಮ್ ಉಮರ್ ಸಖಾಫಿ ಕಾಜೂರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಮುಹಮ್ಮದ್ ಹನೀಫ್ ತೈವಳಪ್ಪು ಕಾಸರಗೋಡು, ಇಸ್ಮಾಯಿಲ್ ಆಲಿಕುಂಞಿ ಮಚ್ಚಂಪಾಡಿ, ಬಶೀರ್ ಸೋಮಂತಡ್ಕ, ಗುತ್ತಿಗೆದಾರ ಜಿ. ಎ ರಫೀಕ್ ಬಾಂಬಿಲ, ಹೈಕೋರ್ಟ್ ನ್ಯಾಯವಾದಿ ವಿನಯಚಂದ್ರ, ವಕ್ಫ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್ ಮರೋಡಿ, ಉದ್ಯಮಿ ಅಬ್ದುಲ್ ಸತ್ತಾರ್ ಸಾಹೇಬ್ ಬಂಗಾಡಿ, ಅಬ್ದುಲ್ ಕರಿಂ ಮಂಗಳೂರು, ಹಝ್ರತ್ ಸೈದಾನಿ ಬೀಬಿ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ, ಅಬ್ದುಲ್ಲತೀಫ್ ಎಸ್.ಎಮ್.ಎಸ್ ಗುರುವಾಯನಕೆರೆ, ಉಳ್ಳಾಲ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರಿಫ್ ಕಲ್ಕಟ್ಟ, ರಹೀಂ ಸಅದಿ, ಸಲೀಂ ಕನ್ಯಾಡಿ, ವಝೀರ್ ಬಂಗಾಡಿ, ಇಸ್‌ಹಾಕ್ ಫಜೀರ್ , ಕಾಜೂರು ಮಾಜಿ ಅಧ್ಯಕ್ಷ ಬಿ.ಎ ಯೂಸುಫ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.
ಕಾಜೂರು ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಶರೀಅತ್ ಕಾಲೇಜು ಮುದರ್ರಿಸ್ ಅಬ್ದುಲ್ ರಹಿಮಾನ್ ಸಅದಿ ಮತ್ತು ರಹ್ಮಾನಿಯಾ ಪ್ರೌಢ ಶಾಲೆ ಶಿಕ್ಷಕ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ಪದವಿ ಪ್ರದಾನ ಕಾರ್ಯಕ್ರಮಗಳನ್ನು ನಿರೂಪಿಸಿದರು.
ಈ ವರ್ಷದ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡಿದ 14 ಮಂದಿಗೆ ‘ಅರ್ರಾಹಿಮ’ ಎಂಬ ಶರೀಅತ್ ಪದವಿ ನೀಡಲಾಯಿತು. ಕಾಜೂರಿನ ಶಿಕ್ಷಣ ಸಂಸ್ಥೆಯಲ್ಲಿ 99 ಮಂದಿ ಉಚಿತ ಶಿಕ್ಷಣ ಪಡೆಯುತ್ರಿದ್ದಾರೆ. ಮದರಸ ವಿಭಾಗದಲ್ಲಿ200 ರಷ್ಟು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಚಿನ್ನದ ನಾಣ್ಯದೊಂದಿಗೆ ಪುರಸ್ಕಾರ ನಡೆಯಿತು. ಕಾಜೂರು ತಂಙಳ್ ಅವರ ಶ್ರೀಮತಿ ಹಾಗೂ ಅತ್ತೆಯವರು ಪ್ರತ್ಯೇಕ ವೇದಿಕೆಯಲ್ಲಿ ಪದವಿ ಪ್ರದಾನ ಮಾಡಿದರು.
ದಫ್ ತಂಡಕ್ಕೂ ಗೌರವ;
ಈ ಸಮಾರಂಭದಲ್ಲಿ ರಿಫಾಯಿಯ್ಯ ದಫ್ಫ್ ಸಮಿತಿ ವತಿಯಿಂದ ಪ್ರತಿದಿನ ಸಾಂಪ್ರದಾಯಿಕ ದಫ್ಫ್ ಕಾರ್ಯಕ್ರಮ ನಡೆಯುತ್ತಿದ್ದು ದಫ್ಫ್ ಉಸ್ತಾದ್ ಅಬ್ದುಲ್ಲ ಮುಸ್ಲಿಯಾರ್, ತರಬೇತುದಾರ ಡಿ.ಹೆಚ್ ಮುಸ್ತಫಾ , ತಂಡದ ವ್ಯವಸ್ಥಾಪಕ ಶಾಕಿರ್ ಅವರಿಗೆ ಹಾಗೂ ಎಲ್ಲಾ ದಫ್ಫ್ ಪ್ರತಿಭೆಗಳಿಗೆ ವೇದಿಕೆಯಲ್ಲಿ ಪುರಸ್ಕಾರ ನೀಡಲಾಯಿತು.
ಮೇ.12 ಉರೂಸ್ ಸಮಾರೋಪ;
ಇನ್ನೆರಡು ದಿನಗಳಲ್ಲಿ ಧಾರ್ಮಿಕ ಪ್ರವಚನ ನಡೆದು ಮೇ.12 ರಂದು ಮಗ್ರಿಬ್ ಬಳಿಕ ಸರ್ವ ಧರ್ಮೀಯ ಸಮ್ಮೇಳನ, ಹಾಗೂ ರಾತ್ರಿ ಉರೂಸ್ ಸಮಾರೋಪ ಮತ್ತು ಮಹಾ ಅನ್ನದಾನ ನಡೆಯಲಿದೆ.