April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಸರಸ್ವತಿ ಭಜನಾ ಮಂದಿರಕ್ಕೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಭೇಟಿ

ಉಜಿರೆ : ಶ್ರೀ ಸರಸ್ವತಿ ಭಜನಾ ಮಂದಿರ ( ರಿ) ವಿವೇಕಾನಂದ ನಗರ ಉಜಿರೆ ಇಲ್ಲಿ ನಡೆಯುತ್ತಿದ್ದ ವಾರದ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರು ಭಾಗವಹಿಸಿದರು. ಭಜನಾ ಮಂಡಳಿಯ ವತಿಯಿಂದ ಇವರನ್ನು ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ರವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.


ಭಜನಾ ಕಾರ್ಯಕ್ರಮದ ನಂತರ ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಯವರು ಭಜನಾ ಮಂಡಳಿಗಳಲ್ಲಿ ಹಿಂದೆ ನಡೆಯುತ್ತಿದ್ದ ಭಜನೆ ಈಗ ಬದಲಾವಣೆಯ ದಾರಿಯಲ್ಲಿ ಆಗುತ್ತಿರುವ ಭಜನೆ ಹಾಗೂ ಇದರಿಂದ ಮುಂದಿನ ದಿನಗಳಲ್ಲಿ ನಡೆಯಬಹುದಾದ ಭಜನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಭಜನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಹಾಗೂ ಸದಸ್ಯರುಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಕೆಲವು ಸಲಹೆಗಳನ್ನು ಸ್ವೀಕರಿಸಿದರು.


ಭಜನಾ ಮಂಡಳಿಯ ಜೊತೆ ಕಾರ್ಯದರ್ಶಿಯಾದ ವಿನೋದ್ ಕುಮಾರ್ ರವರು ಸ್ವಾಗತಿಸಿ, ವಂದಿಸಿದರು.

Related posts

ಬಿಜೆಪಿ ಶಿಶಿಲ ಗ್ರಾಮ ಸಮಿತಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್ ರವರಿಗೆ ರಾಜ್ಯ ಸರಕಾರಿ ನೌಕರರ ಸಹಕಾರಿ ಸಂಘದಿಂದ ಅಭಿನಂದನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗಿರಿಜಾ ಮಡಿವಾಳ ನಿಧನ

Suddi Udaya

ಪಟ್ರಮೆ: ಸೂರ್ಯತ್ತಾವು ನಿವಾಸಿ, ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

Suddi Udaya
error: Content is protected !!