23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 93 ಒಕ್ಕೂಟಗಳ ಕೇಂದ್ರ ಒಕ್ಕೂಟದ ಸಭೆ


ಗುರುವಾಯನಕೆರೆ: ಬಡ ಕುಟುಂಬಗಳ ಸಮಗ್ರ ಅಭಿವೃದ್ಧಿಯೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಧ್ಯೇಯ ಆಗಿದೆ ಎಂದು ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ರವರು ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ 93 ಒಕ್ಕೂಟಗಳ ಕೇಂದ್ರ ಒಕ್ಕೂಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಡವರ ಪರಿವರ್ತನೆಗೆ ಯೋಜನೆಯನ್ನು ಜಾರಿಗೆ ತಂದು ಬಡತನ ನಿರ್ಮೂಲನೆ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನ ಇಟ್ಟಿದ್ದಾರೆ ಎಂದರು. ಇದರ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ ಎಂದು ವಿವರಿಸಿದರು. ಒಕ್ಕೂಟದ ಅಧ್ಯಕ್ಷರು ಒಕ್ಕೂಟದ ಕಣ್ಣಾಗಿರಬೇಕು, ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಹೊಣಗಾರಿಕೆ ಒಕ್ಕೂಟದ ಅಧ್ಯಕ್ಷರಿಗೆ ಇದೆ ಎಂದು ಹೇಳಿದರು. ಒಕ್ಕೂಟದ ಕಣ್ಣು ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಒಕ್ಕೂಟ ಮಂಕಗಬಹುದು ಎಂದು ಎಚ್ಚರಿಕೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಕಲ್ಪದಿಂದ ಒಕ್ಕೂಟದ ಅಧ್ಯಕ್ಷರಾಗಿ ಸೇವೆಸಲ್ಲಿಸಲು ಅವಕಾಶ ಸಿಕ್ಕಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಗುಂಪಿನ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಯೋಜನೆಯೂ ಬ್ಯಾಂಕಿನ ಜೊತೆ ಒಪ್ಪಂದ ಮಾಡಿಕೊಂಡು ಗುಂಪಿನ ಸದಸ್ಯರಿಗೆ ಆರ್ಥಿಕ ಸಹಕಾರವನ್ನು ಒದಗಿಸುತ್ತಿದೆ ಎಂದರು.
ಯೋಜನೆಯ ಸೌಲಭ್ಯಗಳನ್ನ ಒದಗಿಸುವುದೇ ಒಕ್ಕೂಟದ ಪದಾಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರಾ, ನಿಕಟ ಪೂರ್ವ ಅಧ್ಯಕರಾದ ಪ್ರಭಾಕರ್ ಪಸಂದೋಡಿ, ವಲಯ ಅಧ್ಯಕ್ಷ ರಮಾನಂದ ಪೂಜಾರಿ, ಜಯಶಂಕರ್ ಹೆಗ್ಡೆ, ಸತೀಶ್ ಆಚಾರ್ಯ, ರಾಮಣ್ಣ ಗೌಡ, ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳೂ ಭಾಗವಹಿಸಿದ್ದರು.

Related posts

ಇಂದಬೆಟ್ಟು: ಭಾರಿ ಸಿಡಿಲು ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿಗೆ ಮರ ಬಿದ್ದು ಹಾನಿ, ಪ್ರಾಣಾಪಾಯದಿಂದ ಪಾರು

Suddi Udaya

ಕೊಕ್ಕಡ ಡೇವಿಡ್ ಜೈಮಿ ರವರ ಮನೆಗೆ ಡೆಪ್ಯೂಟಿ ರಬ್ಬರ್ ಪ್ರೊಡಕ್ಷನ್ ಕಮೀಷನರ್ ಭೇಟಿ

Suddi Udaya

ಉಜಿರೆಯಲ್ಲಿ ರಕ್ತದಾನ ಶಿಬಿರ; 167 ಯೂನಿಟ್ ರಕ್ತ ಸಂಗ್ರಹ

Suddi Udaya

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya

ಬೆಳಾಲು: ಕೊಯ್ಯೂರು ಅರಣ್ಯದಲ್ಲಿ ಬೆಂಕಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ

Suddi Udaya
error: Content is protected !!