23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

ಬೆಳ್ತಂಗಡಿಯ ರಾಜಕಾರಣದಲ್ಲಿ 5 ದಶಕಗಳ ಕಾಲ ಸೇವೆ ಸಲ್ಲಿಸಿ , 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಅವಿಶ್ರಾಂತ ಜನರ ಸೇವೆಗೈದ ಮಾಜಿ ಶಾಸಕ ವಸಂತ ಬಂಗೇರ ಅವರ ಸ್ಮರಣಾರ್ಥ ಬೆಳ್ತಂಗಡಿಯ ತಾಲೂಕು ಬಸ್ ತಂಗುದಾಣಕ್ಕೆ ಅವರ ಹೆಸರನ್ನೀಡಬೇಕು ಮತ್ತು ಅವರ ಪುತ್ಥಳಿ/ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸಿ ತನ್ನ ವೈಯಕ್ತಿಕ ವರ್ಚಸ್ಸಿನ ಮೂಲಕ ಮೂರು ಪಕ್ಷಗಳಲ್ಲೂ ಶಾಸಕರಾದ ರಾಜ್ಯದ ಏಕೈಕ ರಾಜಕಾರಣಿ ಬಂಗೇರರು. ಜನರ ಸೇವೆಯನ್ನು ತನ್ನ ಉಸಿರಾಗಿಸಿ ತನ್ನ ಇಳಿ ವಯಸ್ಸಿನಲ್ಲೂ ಬಡವರ ಸೇವೆಗೈದ ಅಪರೂಪದ ಜನಸೇವಕ. ತನ್ಮೂಲಕ ರಾಜ್ಯಸರ್ಕಾರ ಬಂಗೇರ ಅವರ ಸೇವೆಯನ್ನು ಪರಿಗಣಿಸಿ, ಪಕ್ಷಾತೀತವಾಗಿ ಜನರ ಒಕ್ಕೊರಲ ಬೇಡಿಕೆಯಾದ ಬಸ್ ನಿಲ್ದಾಣಕ್ಕೆ ಹೆಸರು ಮತ್ತು ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವನಮಹೋತ್ಸವ

Suddi Udaya

ಯುವವಾಹಿನಿ ವೇಣೂರು ಘಟಕದ ವಾರ್ಷಿಕ ಮಹಾಸಭೆ: ಪದಾಧಿಕಾಗಳ ಆಯ್ಕೆ

Suddi Udaya

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ಬೆಳ್ತಂಗಡಿ: ನಾಟಿ ವೈದ್ಯ ಬಾಬು ಆಚಾರ್ಯ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಆ.7ರಿಂದ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ

Suddi Udaya

ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆಯಲ್ಲಿ ನೂತನ ಶಾಖೆ ಉದ್ಘಾಟನೆ

Suddi Udaya
error: Content is protected !!