25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆದ ಎರಡೂವರೆ ದಶಕಗಳಿಂದ ಅಮೂಲ್ಯ ಸೇವೆ ಸಲ್ಲಿಸಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಎಲ್. ಎಚ್.ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಮೇ.11ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಡಾ.ಎಲ್.ಎಚ್ ಮಂಜುನಾಥರವರು ಅದ್ಬುತ ಕೆಲಸಗಳ ಮೂಲಕ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿದ್ದಾರೆ. ನಮ್ಮಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು, ಏನೂ ಮಾಡಬೇಕೆಂಬುದರ ಬಗ್ಗೆ ಜ್ಞಾನವಿರಬೇಕು ಎಂದರು.

ಡಾ.ಎಲ್.ಎಚ್ ಮಂಜುನಾಥ್ ಅವರು ಮಾತನಾಡಿ ಡಾ. ಹೆಗ್ಗಡೆಯವರು ನನಗೆ ದೇವರಿದ್ದಾಗೆ. ಕಳೆದ 23 ವರ್ಷಗಳ ಕಾಲ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಪೂಜ್ಯರಿಗೆ ಕೃತಜ್ಞತೆ ಅರ್ಪಿಸಿದರು.

ಭಾರತೀಯ ಜೀವ ವಿಮಾ ನಿಗಮದ ಮುಂಬೈ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಎಂ. ಜಗನ್ನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳು, ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಡಾ.ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾ‌ರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳಾದ ಡಿ.ಸುರೇಂದ್ರ ಕುಮಾರ್, ವೈ ನಾಗೇಶ್ವರ ರಾವ್, ಸಂಪತ್ ಸಾಮ್ರಾಜ್ಯ, ಉದಯಕುಮಾ‌ರ್ ಶೆಟ್ಟಿ, ಶ್ಯಾಮ್ ಭಟ್, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್.ಪೈ,ಡಾ.ಎಲ್.ಎಚ್ ಮಂಜುನಾಥ್ ಅವರ ಧರ್ಮಪತ್ನಿ ನಳಿನಿ, ಪುತ್ರ ಡಾ.ರೋಹನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್ ಹಾಗೂ ಯೋಜ‌ನೆಯ ವಿವಿಧ ವಿಭಾಗದ ಅಧಿಕಾರಿಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಎಲ್.ಎಚ್ ಮಂಜುನಾಥ್ ದಂಪತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯೋಜನೆಯ ಪ್ರಾದೇಶಿಕ ಕಚೇರಿ, ಕೇಂದ್ರ ಕಚೇರಿ ಹಾಗೂ ಎಸ್.ಡಿ.ಎಂ ನ ವಿವಿಧ ವಿಭಾಗಗಳಿಂದ ಗೌರವಿಸಲಾಯಿತು.

ಯೋಜನೆ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪೂಜಾ ಪಕ್ಕಳ, ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ವಿಭಾಗದ ಅಭಿವೃದ್ಧಿ ಅಧಿಕಾರಿ ಆನಂದ ಸುವರ್ಣ ವಂದಿಸಿದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜಾತ್ರಾಮಹೋತ್ಸವ: 25 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಂದ ಅಮ್ಮನ ಮಡಿಲ ಪ್ರಸಾದ ಸ್ವೀಕಾರ

Suddi Udaya

ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ: ಶ್ರೀ ಮಂ. ಅ. ಪ್ರೌಢಶಾಲೆಯ ಶಿಕ್ಷಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಸುಲ್ಕೇರಿ ಸೇತುವೆ ಬಳಿ ಸ್ಕಿಡ್ ಆಗಿ ಬಿದ್ದ ಬೈಕ್: ರಸ್ತೆಗೆ ಬಿದ್ದು ‌ಸವಾರ ಜಂಶಾದ್‌ ಎಂಬಾತನಿಗೆ ಗಂಭೀರ ಗಾಯ

Suddi Udaya

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ಕುಲಾಲರ ಕ್ರೀಡಾ ಕೂಟ ಸಮಿತಿ ಆಶ್ರಯದಲ್ಲಿ ವಲಯ ಮಟ್ಟದ ಸ್ವಜಾತಿ ಬಾಂಧವರ ಕ್ರೀಡಾಕೂಟ

Suddi Udaya

ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ಕುರಿತು ಪಕ್ಷದ ಪದಾಧಿಕಾರಿಗಳೊಂದಿಗೆ ಶಾಸಕ ಹರೀಶ್ ಪೂಂಜರಿಂದ ಸಿದ್ಧತಾ ಸಭೆ

Suddi Udaya
error: Content is protected !!