24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

ಬೆಳ್ತಂಗಡಿಯ ರಾಜಕಾರಣದಲ್ಲಿ 5 ದಶಕಗಳ ಕಾಲ ಸೇವೆ ಸಲ್ಲಿಸಿ , 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಅವಿಶ್ರಾಂತ ಜನರ ಸೇವೆಗೈದ ಮಾಜಿ ಶಾಸಕ ವಸಂತ ಬಂಗೇರ ಅವರ ಸ್ಮರಣಾರ್ಥ ಬೆಳ್ತಂಗಡಿಯ ತಾಲೂಕು ಬಸ್ ತಂಗುದಾಣಕ್ಕೆ ಅವರ ಹೆಸರನ್ನೀಡಬೇಕು ಮತ್ತು ಅವರ ಪುತ್ಥಳಿ/ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸಿ ತನ್ನ ವೈಯಕ್ತಿಕ ವರ್ಚಸ್ಸಿನ ಮೂಲಕ ಮೂರು ಪಕ್ಷಗಳಲ್ಲೂ ಶಾಸಕರಾದ ರಾಜ್ಯದ ಏಕೈಕ ರಾಜಕಾರಣಿ ಬಂಗೇರರು. ಜನರ ಸೇವೆಯನ್ನು ತನ್ನ ಉಸಿರಾಗಿಸಿ ತನ್ನ ಇಳಿ ವಯಸ್ಸಿನಲ್ಲೂ ಬಡವರ ಸೇವೆಗೈದ ಅಪರೂಪದ ಜನಸೇವಕ. ತನ್ಮೂಲಕ ರಾಜ್ಯಸರ್ಕಾರ ಬಂಗೇರ ಅವರ ಸೇವೆಯನ್ನು ಪರಿಗಣಿಸಿ, ಪಕ್ಷಾತೀತವಾಗಿ ಜನರ ಒಕ್ಕೊರಲ ಬೇಡಿಕೆಯಾದ ಬಸ್ ನಿಲ್ದಾಣಕ್ಕೆ ಹೆಸರು ಮತ್ತು ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಚಿಕಿತ್ಸಾ ನೆರವು

Suddi Udaya

ಕುಕ್ಕೇಡಿ ಗ್ರಾ.ಪಂ.ನಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ

Suddi Udaya

ಮುಂಡಾಜೆಯ ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಗೆ ಬಳಂಜ ಬಿಲ್ಲವ ಸಂಘದಿಂದ ಗೌರವಾರ್ಪಣೆ

Suddi Udaya

ಅರಸಿನಮಕ್ಕಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

Suddi Udaya
error: Content is protected !!