25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಲಾಯಿಲ: ಇಲ್ಲಿಯ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಕಸ್ತೂರಿ ರವರು ಮಾನಸಿಕ ಖಾಯಿಲೆಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟ ಘಟನೆ ಮೇ.10 ರಂದು ನಡೆದಿದೆ.

ಚೇತನ್ ರವರ ದೂರಿನಂತೆ ಲಾಯಿಲ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಚೇತನ್ ರವರ ತಾಯಿ ಶ್ರೀಮತಿ ಕಸ್ತೂರಿ (69 ವರ್ಷ)ರವರು ಸುಮಾರು 3-4 ತಿಂಗಳಿಂದ ಮಾನಸಿಕ ಸಮಸ್ಯೆಯಿದ್ದು ಜೊತೆಗೆ ತಲೆಕೂದಲಿಗೆ ಸಂಬಂಧಪಟ್ಟ ಖಾಯಿಲೆಯಿದ್ದು ಅದಕ್ಕೆ ಜೌಷಧಿ ಹಾಕಿದ್ದು ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಅಂದರೆ ಅಲರ್ಜಿ ಆಗಿರುತ್ತದೆ. ಮೇ 09 ರಂದು ಬೆಳಿಗ್ಗೆ ಚೇತನ್ ಪೇಟೆಗೆ ಹೋಗಿದ್ದು ನಂತರ ಮನೆಗೆ ಬಂದು ನೋಡಿದಾಗ ಕಸ್ತೂರಿ ರವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಮೇ10 ರಂದು ಬೆಳಿಗ್ಗೆ ಸ್ಥಳೀಯರು ಪಿರ್ಯಾದಿದಾರರಿಗೆ ಕರೆ ಮಾಡಿ ಕಸ್ತೂರಿ ರವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಶ್ರೀ ಬಾಲಚಾಮುಂಡಿ ದೈವಸ್ಥಾನದ ಹಿಂಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚೇತನ್ ಹೋಗಿ ನೋಡಿದಾಗ ಕಸ್ತೂರಿ ರವರು ಮೃತಪಟ್ಟಿರುವುದಾಗಿದೆ.

ಚೇತನ್ ತಾಯಿ ಕಸ್ತೂರಿ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ 21/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕೊಕ್ಕಡ ಅಮೃತ ಗ್ರಾ. ಪಂ. ಹಾಗೂ ಅಮೃತ ಸರೋವರದಲ್ಲಿ ಸ್ವಾತಂತ್ರೋತ್ಸವ ಆಚರಣೆ: ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

Suddi Udaya

ಶಿಬಾಜೆ: ಭಂಡಿಹೊಳೆಯಲ್ಲಿ ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದಿಂದ ರಸ್ತೆ ದುರಸ್ತಿ

Suddi Udaya

ಮಾ.15-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆ

Suddi Udaya

ಮೊಗ್ರು: ಕರಂಬಾರುವಿನಲ್ಲಿ ಕಾಡಾನೆ ಪ್ರತ್ಯಕ್ಷ: ನೇತ್ರಾವತಿ ನದಿಯಲ್ಲಿ ಜಳಕ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya
error: Content is protected !!