24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರರವರಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ನುಡಿ ನಮನ ಅರ್ಪಣೆ

ಬಳಂಜ: ತಾಲೂಕು ಕಂಡ ಅಪರೂಪದ ಶ್ರೇಷ್ಠ ರಾಜಕಾರಣಿ ವಸಂತ ಬಂಗೇರರವರು. ಅವರ ನೇರ ನಡೆ ನುಡಿ,ಬಡವರ ಪಾಲಿನ ಆಶಾಕಿರಣವಾಗಿದ್ದ ವಸಂತ ಬಂಗೇರರ ಅಗಲಿಕೆ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಹೇಳಿದರು.

ಅವರು ಮೇ.12 ರಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ,ಯುವ ಬಿಲ್ಲವ ವೇದಿಕೆ,ಮಹಿಳಾ ಬಿಲ್ಲವ ವೇದಿಕೆಯಿಂದ ನಡೆದ ಕೆ.ವಸಂತ ಬಂಗೇರರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ಪಟ್ಟವರು ವಸಂತ ಬಂಗೇರರು.

1982 ರಲ್ಲಿ ಬಳಂಜ ಬಿಲ್ಲವ ಸಂಘದ ಶಂಕು ಸ್ಥಾಪನೆಯನ್ನು ನೇರವೇರಿಸಿ ಬಿಲ್ಲವ ಸಮಾಜದ ಪ್ರಗತಿಗೆ ಸಹಕಾರ ನೀಡಿದ್ದಾರೆ.ಅವರೊಬ್ಬ ಪಕ್ಷಾತೀತ ನಾಯಕ. ಎಲ್ಲರೊಂದಿಗೂ ಉತ್ತಮ‌ ಸಂಭಂದ ಹೊಂದಿದ್ದರು ಎಂದರು.ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ವಸಂತ ಬಂಗೇರರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ನೇರ ನಡೆ ನುಡಿ ಪ್ರೇರಣೆದಾಯಕವಾದುದು. ಐದು ಬಾರಿ ತಾಲೂಕಿನ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬಳಂಜ ಬಿಲ್ಲವ ಸಂಘದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದರು.ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಮಾತನಾಡಿ ಬಂಗೇರರವರು‌ ಅಪರೂಪದ ರಾಜಕಾರಣಿ. ಸುಮಾರು 40 ವರ್ಷದ ರಾಜಕೀಯ ಜೀವನದಲ್ಲಿ ಶುದ್ದ ಹಸ್ತದ ರಾಜಕಾರಣಿಯಾಗಿ ಬಂಗೇರರವರು ಹೆಸರು ಸಂಪಾದಿಸಿದ್ದಾರೆ ಎನ್ನುತ್ತ ನುಡಿ ನಮನ ಅರ್ಪಿಸಿದರು.ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ ಮೂರು ಪಕ್ಷಗಳಲ್ಲಿ ಶಾಸಕರಾದವರಲ್ಲಿ ಬಂಗೇರರು ಮೊದಲಿಗರು. ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲ ಮಾದರಿ ಎಂದರು.

ಈ ಸಂದರ್ಭದಲ್ಲಿ ಸಂಘದ ಮಾಜಿ‌ ಅಧ್ಯಕ್ಷ ಹೆಚ್.ದೇಜಪ್ಪ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ನಿರ್ದೆಶಕರಾದ ದಿನೇಶ್ ಪೂಜಾರಿ ಅಂತರ,ರಂಜಿತ್ ಪೂಜಾರಿ, ಪ್ರವಿಣ್ ಪೂಜಾರಿ ಲಾಂತ್ಯಾರು,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಸದಸ್ಯ ಸಂಪತ್ ಪಿ ಕೋಟ್ಯಾನ್, ಆದರ್ಶ್ ಪೂಜಾರಿ,ದೀಪಕ್ ಹೆಚ್.ಡಿ, ಹಿರಿಯರಾದ ಲಕ್ಷ್ಮಣ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಎಸ್‌ಡಿಪಿಐ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಅವಲೋಕನ ಸಭೆ

Suddi Udaya

ಮಡಂತ್ಯಾರು: ಆನೆಗುಂದಿ ಗುರುಸೇವಾ ಪರಿಷತ್ ಇದರ ಆಶ್ರಯದಲ್ಲಿ ಚಿಂತನ – ಮಂಥನ ಸಮಾವೇಶದ ಉದ್ಘಾಟನೆ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸುನೀಲ್ ಕುಮಾರ್ , ಉಪಾಧ್ಯಕ್ಷರಾಗಿ ದಯಾನಂದ ಎಸ್

Suddi Udaya

ಕಳಿಯ ಗ್ರಾಮದ ವಾರ್ಡ್ ಗಳಲ್ಲಿ ಅಗತ್ಯವಿದ್ದ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಸೋಲಾರ್ ದೀಪ ಅಳವಡಿಕೆ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಳಂಜ ಶಾಲೆಯಲ್ಲಿ ಕಾರ್ಯಾಗಾರ

Suddi Udaya
error: Content is protected !!