24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘದ ವಾರ್ಷಿಕ ಮಹಾಸಭೆ: ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘ ಬೆಳ್ತಂಗಡಿ ಇದರ 43ನೇ ವಾರ್ಷಿಕ ಮಹಾಸಭೆ
ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ
ಕಾರ್ಯಕ್ರಮ ಮೇ 12ರಂದು ಲಾಯಿಲ ಕಕ್ಕೇನ ಗಾಣಿಗ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ ಸಿ ಎಫ್ ಲಿಮಿಟೆಡ್, ಪಣಂಬೂರು ಇದರ ಸೀನಿಯರ್ ಇಂಜಿನಿಯರ್ ಚಂದ್ರಶೇಖ‌ರ್ ಎಡಪದವು ಮಾತನಾಡಿ “ಗಾಣಿಗ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಾವು ನೆರವಾಗಬೇಕು. ಮಹಿಳಾ ಸಂಘದ ಅಧ್ಯಕ್ಷರು ಮಕ್ಕಳ ಬಗ್ಗೆ ಒಂದು ಸರ್ವೆ ಮಾಡಬೇಕು. ಸಂಘದಿಂದ ಪ್ರೋತ್ಸಾಹ ಪಡೆದ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಸಂಘಕ್ಕೆ ಬಂದು ನೆರವಾಗಬೇಕು ” ಸಂಘದಿಂದ ವಿದ್ಯಾರ್ಥಿಗಳು ಶಿಕ್ಷಣ ಬಗ್ಗೆಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಮಂಗಳೂರು ತಾ.ಗಾಣಿಗರ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು ಮಾತನಾಡಿ ” ನಮ್ಮ ಸಂಘ ಆರ್ಥಿಕ ಕ್ರೋಢಿಕರಣ ಮಾಡಿ ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೆ ನೆರವಾಗುವಂತಾಗಬೇಕು. ಸಮಾಜದ ಸಾಧಕರಿಗೆ ಸನ್ಮಾನಿಸುವುದು ಹಿರಿಯರಿಗೆ ನಾವು ಕೊಡುವ ವಿಶೇಷ ಗೌರವವಾಗಿದೆ. ಬೆಳ್ತಂಗಡಿ ಸಂಘ ಬೆಳೆದು ಬಂದ ಬಗೆಯನ್ನು ವಿಸ್ತಾರವಾಗಿ ವಿವರಿಸಿದರು”

ಬೆಳ್ತಂಗಡಿ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಸಪಲ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ಪ್ರಭಾಕರ, ಮಹಿಳಾ ವಿಭಾಗದ ಅಧ್ಯಕ್ಷೆ ಸತ್ಯವತಿ, ಯುವ ವಿಭಾಗದ ಅಧ್ಯಕ್ಷ ದಾಮೋದರ್ ದೊಂಡೋಲೆ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ಗಾಣಿಗ ಸಮಾಜದ ಸಾಧಕರಾದ ವ್ಯಾಪಾರಸ್ಥರಾದ ನಾರಾಯಣ ಸಪಲ್ಯ, ಕೃಷಿಕರಾದ ಜಿನ್ನಪ್ಪ ಸಪಲ್ಯ., ಮಾಜಿ ಗ್ರಾಮ ಕಾರಣಿಕ ರಾಮನಾಥ್ ಗಾಣಿಗ ಇವರನ್ನು ಗೌರವಿಸಲಾಯಿತು. ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಶಾತ್ವಿಕ್ ಕನ್ನಾಜೆ, ಪಂಚಮಿ ನಾಳ, ಪ್ರಣಮ್ಯ ಕನ್ಯಾಡಿ ಕಟ್ಟೆ, ಸುಪ್ರೀತಾ ಕಿಂಡಾಡಿ, ಚಿಂತನ್ ಹೊಸ ಕುಮೆರು, ರೇಷ್ಮಾ ಜಿ .ಕನ್ನಾಜೆ, ಯಶಸ್ವಿ ಕೇರಳ ಕೋಡಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಒಂದರಿಂದ 9ರ ತನಕ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

ಕಾರ್ಯದರ್ಶಿ ಸತೀಶ್ ಓಡದಕರಿಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ತುಕರಾಮ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಯ ಪ್ರಿಯದರ್ಶಿನಿ ಧನ್ಯವಾದವಿತ್ತರು.

Related posts

ನಾರಾವಿ: ‘ಸನ್ನಿಧಿ’ ನೂತನ ಟೈಲರಿಂಗ್ ಸೆಂಟರ್ ಶುಭಾರಂಭ

Suddi Udaya

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ :ಮೇ.10 ಚುನಾವಣೆ – ಮೇ. 13: ಮತ ಎಣಿಕೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಣೆ

Suddi Udaya

ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಾನಂದ ಪೂಜಾರಿ ಲಾಯಿಲರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ಪಿ. ಡೀಕಯ್ಯ ಚಳುವಳಿಯ ಹೆಜ್ಜೆ ಗುರುತುಗಳು-ಒಂದು ಸ್ಮರಣೆ’ ಕಾರ್ಯಕ್ರಮ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya
error: Content is protected !!