April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗನಗದು ದೋಚಿ ಪರಾರಿ

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗನಗದು ದೋಚಿದ ಪ್ರಕರಣ ಕುದ್ಯಾಡಿಯಲ್ಲಿ ನಡೆದಿದೆ.

ಕುದ್ಯಾಡಿ ಗ್ರಾಮ ಪಿಲ್ಯ ನಿವಾಸಿ ನೀತಾ (34) ಎಂಬವರು ಮೇ 11 ರಂದು ಮಧ್ಯಾಹ್ನ ತನ್ನ ಮನೆಗೆ ಬೀಗ ಹಾಕಿ ತವರು ಮನೆಗೆ ಹೋಗಿದ್ದರು.ಮೇ 13ರಂದು ಮನೆಯ ಬೀಗ ಒಡೆದಿರುವ ಬಗ್ಗೆ ನೆರೆಮನೆಯರವರು ಕರೆ ಮಾಡಿದ್ದು, ಮನೆಗೆ ಬಂದು ಪರಿಶೀಲನೆ ನಡೆಸಿದಾಗ,ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೇ ಆಯುಧದಿಂದ ಮುರಿದು,ಒಳ ಪ್ರವೇಶಿಸಿ ಬೀರುವಿನ ಬೀಗವನ್ನು ತೆರೆದು, ಅದರಲ್ಲಿದ್ದ ಅಂದಾಜು 1,98,000 ರೂ. ಮೌಲ್ಯದ 33 ಗ್ರಾಂ ಚಿನ್ನಾಭರಣಗಳು ಹಾಗೂ 40,000 ರೂ. ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ.

Related posts

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ‘ಟೆಕ್ ಯುವ – 25’

Suddi Udaya

ಸಿಎ ಪರೀಕ್ಷೆಯಲ್ಲಿ ಮಡಂತ್ಯಾರಿನ ಅಲ್ ಸ್ಟನ್ ಸೋನಿಲ್ ಡಯಾಸ್ ತೇರ್ಗಡೆ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ: ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಚರಂಡಿ ದುರಸ್ತಿ

Suddi Udaya

ಬೆಳ್ತಂಗಡಿಯಲ್ಲಿ ವಿ.ಪ. ಶಾಸಕ ಹರೀಶ್ ಕುಮಾರ್ ರವರಿಂದ ಸರಕಾರದ “ಶಕ್ತಿ”ಯೋಜನೆಗೆ ಚಾಲನೆ

Suddi Udaya
error: Content is protected !!