September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗನಗದು ದೋಚಿ ಪರಾರಿ

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗನಗದು ದೋಚಿದ ಪ್ರಕರಣ ಕುದ್ಯಾಡಿಯಲ್ಲಿ ನಡೆದಿದೆ.

ಕುದ್ಯಾಡಿ ಗ್ರಾಮ ಪಿಲ್ಯ ನಿವಾಸಿ ನೀತಾ (34) ಎಂಬವರು ಮೇ 11 ರಂದು ಮಧ್ಯಾಹ್ನ ತನ್ನ ಮನೆಗೆ ಬೀಗ ಹಾಕಿ ತವರು ಮನೆಗೆ ಹೋಗಿದ್ದರು.ಮೇ 13ರಂದು ಮನೆಯ ಬೀಗ ಒಡೆದಿರುವ ಬಗ್ಗೆ ನೆರೆಮನೆಯರವರು ಕರೆ ಮಾಡಿದ್ದು, ಮನೆಗೆ ಬಂದು ಪರಿಶೀಲನೆ ನಡೆಸಿದಾಗ,ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೇ ಆಯುಧದಿಂದ ಮುರಿದು,ಒಳ ಪ್ರವೇಶಿಸಿ ಬೀರುವಿನ ಬೀಗವನ್ನು ತೆರೆದು, ಅದರಲ್ಲಿದ್ದ ಅಂದಾಜು 1,98,000 ರೂ. ಮೌಲ್ಯದ 33 ಗ್ರಾಂ ಚಿನ್ನಾಭರಣಗಳು ಹಾಗೂ 40,000 ರೂ. ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ.

Related posts

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

Suddi Udaya

ಹುಣ್ಸೆಕಟ್ಟೆ : ಆಟೋ ಚಾಲಕ ಪಿ.ಹರೀಶ್ಚಂದ್ರ ನಿಧನ

Suddi Udaya

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಸನ್ಮಾನ: ನೀಟ್ ಸಾಧನೆಯ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ವಿದ್ಯಾರ್ಥಿಗಳನ್ನು ಕಳುಹಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆ

Suddi Udaya

ಜಪಾನ್ ದೇಶದ ಸಾಂಸ್ಕೃತಿಕ ವಿನಿಮಯ ಉತ್ಸವದಲ್ಲಿ ಉಜಿರೆ ಎಸ್‌ಡಿಎಂ ನ ವಿದ್ಯಾರ್ಥಿಗಳು

Suddi Udaya

ಇಳಂತಿಲ: ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

Suddi Udaya
error: Content is protected !!