24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ : ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೈದ ನಿವೃತ್ತ ಯೋಧ ಗಣೇಶ್ ಬಿ ಎಲ್ ರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನಾ ಕಾರ್ಯಕ್ರಮ

ಲಾಯಿಲ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 21 ವರ್ಷಗಳಿಂದ ದೇಶ ಸೇವೆಗೈದು ಪಂಜಾಬ್, ಡೆಲ್ಲಿ, ಉತ್ತರಪ್ರದೇಶ, ಜಮ್ಮುಕಾಶ್ಮೀರ, ಅಸ್ಸಾಂ, ರಾಜಸ್ಥಾನ್, ಬೆಂಗಳೂರು, ಮಣಿಪುರ, ಪಂಜಾಬ್, ಮುಂತಾದೆಡೆ ಸೇವೆಗೈದು ಸೇವಾ ನಿವೃತ್ತಿ ಹೊಂದಿದ ಲಾಯಿಲದ ನಿವೃತ್ತ ಯೋಧ ಗಣೇಶ್ ಬಿ ಎಲ್ ಅವರಿಗೆ ಅಭಿನಂದನಾ ಕಾರ್ಯಕ್ರಮವು ಮೇ.12ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಿತು.

ಬೆಳ್ತಂಗಡಿ ನ್ಯಾಯವಾದಿ ಧನಂಜಯ ರಾವ್ ಆಭಿನಂದನಾ ಭಾಷಣ ಮಾಡಿದರು.


ಈ ಸಂದರ್ಭದಲ್ಲಿ ಮಾಜಿ ಸೈನಿಕ ಅಧ್ಯಕ್ಷ ಸುನಿಲ್ ಶೆಣೈ, ಯೋಧರ ಮಾತೃ ಪಿತೃರಾದ ಕೃಷ್ಣಪ್ಪ ನಾಯ್ಕ್ ಮತ್ತು ಶ್ರೀಮತಿ ವಾರಿಜ, ಸಹೋದರ ನ್ಯಾಯವಾದಿ ಸಂತೋಷ್ ಕುಮಾರ್, ಲಾಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುಕ್ಮಯ ಕನ್ನಾಜೆ, ಮಾಜಿ ಉಪಾಧ್ಯಕ್ಷ ಗಣೇಶ್ ಲಾಯಿಲ, ಬೆಳ್ತಂಗಡಿ ಯಕ್ಷ ಪಟ್ಲ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ, ವಿಠಲ್ ಶೆಟ್ಟಿ ಲಾಯಿಲ, ಹಾಗೂ ಕರ್ನೋಡಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ. ಹಳೆ ವಿದ್ಯಾರ್ಥಿ ಸಂಘ, ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ್ಯ ಸಭಾ, ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ, ಲಾಯಿಲ ಓಂ ಶಕ್ತಿ ಗೆಳೆಯರ ಬಳಗ, ಲಾಯಿಲ ಮಾರಿಗುಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಲಾಯಿಲ ನೂರುಲ್ ಹುದಾ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ , ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸೇವಾ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಸಾಮರಸ್ಯ ಸಾರಿದ ಮಂಗಳೂರು ದಸರಾ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಹರ್ಷ

Suddi Udaya

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ಭಾರತೀಯ ಲೆಕ್ಕ ಪರಿಶೋಧಕರ ಸಂಘದಿಂದ ಸಿಎ ಸಾಧಕಿ ನಿರೀಕ್ಷಾ ಎನ್.ನಾವರರಿಗೆ ಗೌರವಾರ್ಪಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ| ರಿತೇಶ್ ಕೊಯ್ಯೂರು ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ

Suddi Udaya

ಕೇಳದಪೇಟೆ ಸ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಕೊಕ್ಕಡ: ಹೊನ್ನಮ್ಮ ಮನೆ ನಿರ್ಮಾಣಕ್ಕೆ ನೆರವು

Suddi Udaya
error: Content is protected !!