September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೃದ್ದಾಶ್ರಮ ವಾಸಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಮಾದರಿಯಾದ ನ್ಯಾಯವಾದಿ ಮುರಳಿ ಬಲಿಪ: ಎರಡು ಗೋಶಾಲೆಗಳಿಗೂ ದೇಣಿಗೆ

ಬೆಳ್ತಂಗಡಿ; ನ್ಯಾಯವಾದಿಯಾಗಿ ಮತ್ತು ನೋಟರಿ ಪಬ್ಲಿಕ್ ಆಗಿ ಬೆಳ್ತಂಗಡಿಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಮುರಳಿ ಬಲಿಪ ಅವರು ವೃದ್ದಾಶ್ರಮ ವಾಸಿಗಳ ಜೊತೆಗೆ ತನ್ನ ಹುಟ್ಟುಹಬ್ಬ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.ಜೊತೆಗೆ ಅವರು ಅಂದು ಎರಡು ಗೋಶಾಲೆಗಳಿಗೂ ದೇಣಿಗೆ ಸಮರ್ಪಿಸಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಬಲಿಪ ರೆಸಾರ್ಟ್ ನಲ್ಲಿ ಬೆಳ್ತಂಗಡಿ ಅನುಗ್ರಹ ವೃದ್ಧಾಶ್ರಮ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.ತನ್ನ ಹುಟ್ಟುಹಬ್ಬದ ದಿನವೇ ಬೆಳಗ್ಗೆ ತಾಲೂಕಿನ‌ ಗುಂಡೂರಿಯಲ್ಲಿರುವ ಗೋಶಾಲೆಗೆ ತೆರಳಿ ಜಾನುವಾರುಗಳಿಗೆ ಒಂದು ಕ್ವಿಂಟಾಲ್ ಕಲ್ಲಂಗಡಿ ಹಣ್ಣನ್ನು ಸ್ವತಃ ತಾವೇ ತಿನ್ನಿಸಿ ಖುಷಿಪಟ್ಟರು.

ಅಲ್ಲದೆ ಅಲ್ಲಿನ ಗೋಶಾಲೆಗೆ ಹಾಗೂ ತಾಲೂಕಿನ ಕಳೆಂಜ ಗ್ರಾಮದಲ್ಲಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ ನವರು ಮುನ್ನಡೆಸುವ ನಂದಗೋಕುಲ ಗೋಶಾಲೆಗೆ ತಲಾ 5 ಸಾವಿರದಂತೆ ದೇಣಿಗೆ ಸಮರ್ಪಿಸಿ ವಿಶೇಷತೆ ಮೆರೆದರು. ಅವರ ಈ ಸೇವೆಗೆ ಪತ್ನಿ ಮನೋರಮಾ ಬಲಿಪ, ಇಬ್ಬರು ಪುತ್ರರಾದ ಮಯೂರ್ ಬಲಿಪ ಹಾಗೂ ಮಂದಾರ ಬಲಿಪ ಅವರು ಸಾಥ್ ನೀಡಿದರು.ವಿದೇಶಿ ಸಂಸ್ಕೃತಿ ಬೆಂಬತ್ತಿ‌ ನಾನಾ ತರದ ವಿಕೃತಿಗಳನ್ನು ಮೆರೆಯುವ ಜನರ ಮಧ್ಯೆ ಮುರಳಿ ಬಲಿಪ ಅವರು ಭಾರತೀಯತೆ ಮತ್ತು ಮಾನವೀಯತೆಗೆ ಒತ್ತು ನೀಡಿದರು.

Related posts

ಜೈ ತುಳುನಾಡ್ ಬೆಂಗಳೂರು ಘಟಕದ ಕೋಶಾಧಿಕಾರಿಯಾಗಿ ರಂಜನ್ ಬೆಳಾಲು

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ರಕ್ಷಾ ಬಂಧನ ಆಚರಣೆ

Suddi Udaya

ಚೆಕ್ ಬೌನ್ಸ್ ಪ್ರಕರಣ: ನ್ಯಾಯಾಲಯಕ್ಕೆ ಐದು ವರ್ಷ ಹಾಜರಾಗದ ಆರೋಪಿಯ ಬಂಧನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಶ್ರಫ್ ನೆರಿಯ, ಹಿರಿಯ ಉಪಾಧ್ಯಕ್ಷ ಪ್ರವೀಣ್ ಗೌಡ, ಖಜಾಂಚಿ ರಾಜೇಶ್ ಪುದುಚೇರಿ

Suddi Udaya

ಬೆಳ್ತಂಗಡಿ: ಎಸ್ ಬಿ ಐ ಲೈಫ್ ಇನ್ಸೂರೆನ್ಸ್ ನಿಂದ ವಿಮಾ ಪರಿಹಾರ

Suddi Udaya

ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!