24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ: ಕಬಕದ ಇನೋವ ಕಾರು ಡಿಕ್ಕಿ: ಜೀವ ಉಳಿಸಿದ ಮಣ್ಣಿನ ದಿಣ್ಣೆ

ಬೆಳ್ತಂಗಡಿ :ಗೇರುಕಟ್ಟೆ ಸಮೀಪದ ಸಂಬೋಳ್ಯ ತಿರುವು ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಗೆ ಇನ್ನೋವ ಕಾರು ಡಿಕ್ಕಿಯಾದ ಘಟನೆ ಮೇ.14 ರಂದು ಸಂಜೆ ನಡೆಯಿತು.

ಪುತ್ತೂರು ತಾಲೂಕಿನ ಕಬಕದ ಅನ್ವರ್ ತಮ್ಮ ಇನೋವ ಕಾರಿನಲ್ಲಿ (ಕೆ.ಎ.೦೩. ಎನ್.ಸಿ ೯೬೬೧) ಕುಟುಂಬದ ಸದಸ್ಯರೊಂದಿಗೆ ಬೆಳ್ತಂಗಡಿ ಕಾಜೂರು ದರ್ಗಾ ಝಿಯಾರತ್ ಯಾತ್ರೆ ಮುಗಿಸಿ ಕಬಕ ತಮ್ಮ ಊರಿಗೆ ಗುರುವಾಯನಕೆರೆ, ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಮೂಲಕ ಹೋಗುತ್ತಿದ್ದಾಗ ಗೇರುಕಟ್ಚೆ ಸಮೀಪದ ಸಂಬೋಳ್ಯ ರಸ್ತೆಯ ಪಕ್ಕದ ಡಿಕ್ಕಿಯಾಗಿದೆ.ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಜನ ಗಂಡಸರು ಇಬ್ಬರು ಹೆಂಗಸರು,2ಮಕ್ಕಳು, 1ಚಿಕ್ಕ ಮಗು ಸೇರಿ ಸಣ್ಣ, ಪುಟ್ಟ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ.

ಘಟನಾ ಸ್ಥಳದಲ್ಲಿ ವಿದ್ಯುತ್ ಟವರ್ ಹಾಗೂ ವಿದ್ಯುತ್ ಕಂಬಗಳ ಮಧ್ಯೆ ಕೂದಲೇಳೆವ ಅಂತರದಲ್ಲಿದ್ದು ಅದೃಷ್ಟವಶಾತ್ ದೊಡ್ಡ ಆನಾಹುತ ತಪ್ಪಿದೆ.ಚಾಲಕ ನಿದ್ದೆ ಮಂಪರಿನಲ್ಲಿದ್ದು ಅತೀ ವೇಗವಾಗಿ ಕಾರು ಡಿಕ್ಕಿ ಯಾಗಲು ಕಾರಣವೆಂದು ಸ್ಥಳೀಯ ಪ್ರತ್ಯೇಕ್ಷದರ್ಶಿಗಳು ಅಭಿಪ್ರಾಯ ಪಟ್ಟರು.

Related posts

ಡಾ|| ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸುದ್ದಿ ಉದಯ ವಾರಪತ್ರಿಕೆಯಿಂದ ವಿಶೇಷ ಪುರವಾಣಿ

Suddi Udaya

ಕಳೆಂಜ: ಕೃಷಿಕ ಪೆರ್ನು ಗೌಡ ನಿಧನ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಈದ್ ಸೌಹಾರ್ದ ಸಂದೇಶ ಕಾರ್ಯಕ್ರಮ: ಭಾರತ ಸೌಹಾರ್ದತೆಯ ಸುಂದರ ಹೂದೋಟ- ಝಮೀರ್ ಸ‌ಅದಿ

Suddi Udaya

ಕಲ್ಮಂಜ ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ತ್ರೋಬಾಲ್ ಪಂದ್ಯಾಟ: ಕೊಯ್ಯುರು ಸರಕಾರಿ ಪ್ರೌಢಶಾಲಾ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!