23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ 2 ದಿನದ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ ಇದರ ನೇತೃತ್ವದಲ್ಲಿ , ಸಿ.ಒ.ಡಿ.ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಸಹಕಾರದಿಂದ ಕ್ಲಸ್ಟರ್ ಮಟ್ಟದ ಹವಾಮಾನ ಬದಲಾವಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಮೇ 15 ರಂದು ಆಯೋಜಿಸಿಲಾಗಿತ್ತು.

ಹವಾಮಾನ ಬದಲಾವಣೆಯು ಇತ್ತೀಚೆಗೆ ನಮ್ಮನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ, ಇದರ ಬಗ್ಗೆ ಅರಿವು ಪಡೆಯುವುದು ಅತ್ಯಗತ್ಯ ಎಂದು ಉದ್ಘಾಟನೆಯನ್ನು ನೆರವೇರಿಸಿದ ಕ್ರಾಸ್ ಸಂಸ್ಥೆ ಬೆಂಗಳೂರು ಇದರ ರಾಜ್ಯ ಸಂಯೋಜಕಿ ಶ್ರೀಮತಿ ಲೈನಾ ಲಸ್ರಾದೊ ರವರು ತಿಳಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾನಿನಿ ಮಹಿಳಾ ರಾಜ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ರವರು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಪರಿಸರ ಸಂರಕ್ಷಣೆ ಅಧಿಕಾರಿ ಶ್ರೀ ಭುವನ್ ಹಾಗೂ ಸದಸ್ಯರಾದ ಶ್ರೀ ಗಣೇಶ್ ರವರು ಹವಾಮಾನ ಬದಲಾವಣೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು. ಸಿ.ಒ.ಡಿ.ಪಿ, ಕಿಡ್ಸ್ ಮತ್ತು ಸಂಪದ ಸಂಸ್ಥೆಯ ಒಕ್ಕೂಟ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿ.ಒ.ಡಿ.ಪಿ ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥನೆ ಗೀತೆ ಹಾಡಿದರು. ಡಿ.ಕೆ.ಆರ್.ಡಿ.ಎಸ್ ಕಾರ್ಯಕರ್ತೆ ಶ್ರೀಮತಿ ಸುಶೀಲಾ ಎಲ್ಲರನ್ನು ಸ್ವಾಗತಿಸಿದರು. ಶ್ರೀ ಮಾರ್ಕ್ ಡಿ ಸೋಜ ರವರು ಡೈಸಿ ವಂದಿಸಿದರು. ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 42 ಮಂದಿ ಭಾಗವಹಿಸಿದರು.

Related posts

ನಾಳ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಗೆ ಮದರ್ ತೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್

Suddi Udaya

ನಾವೂರು ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್ ಭೇಟಿ

Suddi Udaya

ಚಾರ್ಮಾಡಿ: ಆಡಿಮಾರು ಇಂದಿರಾ ಮೋಹನ್ ಮನೆಗೆ ಬಿದ್ದ ಬೃಹತ್ ಮರ:ಶೌರ್ಯ ಘಟಕದ ಸ್ವಯಂ ಸೇವಕರಿಂದ ತೆರವುಗೊಳಿಸುವ ಕಾರ್ಯ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya
error: Content is protected !!