25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

ಕಳೆಂಜ: ಕಳೆಂಜದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಂದಗೋಕುಲ ಗೋಶಾಲೆಯಲ್ಲಿ ಮೇ 26ರಂದು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಬರೋಡಾ ಉದ್ಯಮಿ ಶಶಿಧರ್ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ ನಡೆಯಲಿದೆ.

ಗೌರವ ಮಾರ್ಗದರ್ಶಿಗಳಾದ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ,ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಗುರುವಾಯನಕೆರೆ,ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ‌ಎಂ.ಎಂ ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹಾಗೂ ಟ್ರಸ್ಟಿಗಳು, ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುತ್ತಿದ್ದಾರೆ.

ಮೇ 19ರಂದು ವಿಶೇಷ ಗೋಗ್ರಾಸ ಹೊರೆಕಾಣಿಕೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳಿಂದ ಗೋಗ್ರಾಸ ಸಂಗ್ರಹ ಗೋಗ್ರಾಸ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಹೊರೆಕಾಣಿಕೆಯ ಬೃಹತ್ ಶೋಭಾಯಾತ್ರೆ ಬೆಳ್ತಂಗಡಿ ಎ.ಪಿ.ಎಂ.ಸಿ ಮೈದಾನದಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

Related posts

ಹಾದಿಬೀದಿಯಲ್ಲಿ ಭಿಕ್ಷೆ ಬೇಡಿ ಕಾಲ ಕಳೆಯುತ್ತಿದ್ದ ವಯೋವೃದ್ಧೆ: ಅನಾಥೆಯಾದ ಅಜ್ಜಿಗೆ ಆಸರೆಯಾದ ಹೋಟೆಲ್ ಮಾಲಕ ರಮೇಶ್ ಕೋಟ್ಯಾನ್

Suddi Udaya

ಜ.29 (ಇಂದು): ಬದ್ಯಾರಿನಲ್ಲಿ “ಹಿಬರೋಡಿ ಯಕ್ಷೋತ್ಸವ”‌ -“ಸಹಸ್ರ ಕವಚ ಮೋಕ್ಷ” ಯಕ್ಷಗಾನ ಬಯಲಾಟ”

Suddi Udaya

ಕೊಕ್ಕಡ ಶ್ರೀ ಕ್ಷೇತ್ರ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಡಿ. 29 ರಂದು ನಡೆಯಲಿರುವ ಬಳ್ಳಮಂಜ ಶೇಷ ನಾಗ ಜೋಡು ಕರೆ ಕಂಬಳದ ಪೂರ್ವ ಸಿದ್ಧತಾ ಸಭೆ

Suddi Udaya

ಸುಲ್ಕೇರಿಮೊಗ್ರು ಗ್ರಾಮದ ಸಂಜೀವ ಇವರ ಮನೆಯ ಶೀಟ್ ಸಂಪೂರ್ಣ ಕುಸಿದು ಬಿದ್ದು ಹಾನಿ

Suddi Udaya

ರುಕ್ಮಯ್ಯ ಗೌಡ ಬದ್ಯಾರು ವಿಧಿವಶ

Suddi Udaya
error: Content is protected !!