ಉಜಿರೆ ಮಾಚಾರು ಗುಂಡಿಕಂಡ ಮಣಿಕ್ಕೆ ಎಂಬಲ್ಲಿ ಬಾಬು ಎಂಬವರ ಮನೆಗೆ ಬಡಿದ ಸಿಡಿಲು: ಮನೆಯ ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಗೆ ಹಾನಿ

Suddi Udaya

Updated on:

ಬೆಳ್ತಂಗಡಿ: ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮತ್ತೆ ಗುಡುಗು, ಸಿಡಿಲು ಸಹಿತ ಬಾರಿ ಮಳೆಯಾಗಿದೆ. ಉಜಿರೆ ಗ್ರಾಮದ ಮಾಚಾರು ಗುಂಡಿಕಂಡ ಮಣಿಕ್ಕೆ ಎಂಬಲ್ಲಿ ಬಾಬು ಮುಗೇರ ಎಂಬವರ ಮನೆಗೆ ಸಿಡಿಲು ಬಡಿದು ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಪುಡುಪುಡಿಯಾಗಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪಂ. ಸದಸ್ಯ ಗುರುಪ್ರಸಾದ್ ‘ಟಿ ನೀಡಿ ವರದಿ ಪಡೆದಿದ್ದಾರೆ.


ಕೊಯ್ಯೂರು ಗ್ರಾಮದ ಮೈಂದಕೊಡಿ ಲೋಕಯ್ಯ ಗೌಡರ ಮನೆಯ ಬಳಿ ತೆಂಗಿನ ಮರಕ್ಕೆ ಸಿಡಿಲು ಬಿದ್ದು ಬೆಂಕಿ ಹತ್ತಿಕೊಂಡ ಘಟನೆ ನಡೆಯಿತು. ಮನೆಮಂದಿ ಇರುವ ವೇಳೆಗೆ ಸಿಡಿಲು ಬಡಿದಿದ್ದು, ಮನೆಮಂದಿ ಬೆಚ್ಚಿನಿದ್ದಿದ್ದರು. ಬಳಿಕ ಗಮನಿಸಿದಾಗ ತೆಂಗಿನ ಮರದಲ್ಲಿ ಬೆಂಕಿ ಕೆಲ ಹೊತ್ತು ಉರಿದಿದೆ.


ಬೆಳ್ತಂಗಡಿ, ನಡ, ಮಂಜೊಟ್ಟಿ, ಗುರುವಾಯನಕೆರೆ ಸಹಿತ ಗೇರುಕಟ್ಟೆ, ಕಳಿಯ ಇತರೆಡೆ ಮಳೆಯಾಗಿದ್ದು, ಗುರುವಾಯನಕೆರೆ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಚರಂಡಿ ಕಾರ್ಯ ಅಪೂರ್ಣಗೊಂಡ ಪರಿಣಾಮ ಚರ್ಚ್ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತು ಪಕ್ಕಡ ಅಂಗಡಿ ಮುಂಗಟ್ಟುಗಳ ಸುತ್ತ ನೀರು ನಿಂತಿತ್ತು. ವಾಹನ ಸವಾರರು ಪರದಾಡುವಂತಾಯಿತು.

.

Leave a Comment

error: Content is protected !!