ಬಳಂಜ : ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಸಮಾಜಕಾರ್ಯ ವಿಭಾಗದ ವತಿಯಿಂದ ಮೇ 15 ರಂದು ಬಳಂಜ ಫಾರ್ಮ್ಸ್ ಮತ್ತು ನರ್ಸರಿಗೆ ಶೈಕ್ಷಣಿಕ ಕ್ಷೇತ್ರ ಭೇಟಿ ನೀಡಿದರು.
ಬಳಂಜ ಸಮೀಪದ ಬಳಂಜ ಫಾರ್ಮ್ ಮತ್ತು ನರ್ಸರಿಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಅನಿಲ್ ಬಳಂಜ ವಿದ್ಯಾರ್ಥಿಗಳಿಗೆ ಬಳಂಜ ಫಾರ್ಮ್‌ನಲ್ಲಿರುವ ವಿವಿಧ ಸಸ್ಯಗಳು, ಹಣ್ಣಿನ ಗಿಡಗಳು ಮತ್ತು ಕೃಷಿ ಪದ್ದತಿಯನ್ನು ಪರಿಚಯ ಮಾಡಿಕೊಟ್ಟರು . ಸುಮಾರು 35 ಎಕರೆಗಳಷ್ಟು ವಿಸ್ತೀರ್ಣದ ಬಳಂಜ ಫಾರ್ಮ್‌ನಲ್ಲಿ 60 ದೇಶಗಳ ಬಹು ಅಪರೂಪದ 80 ಕ್ಕೂ ಅಧಿಕ ತಳಿಗಳ ಸಸ್ಯಗಳು ಹಾಗೂ ಹಣ್ಣಿನ ಗಿಡಗಳು ವಿಶೇಷವಾಗಿದ್ದವು. ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಸ್ವಾತಿ , ಅಕ್ಷತಾ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕ್ಷಮಾ ವಂದಿಸಿದರು.