ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮೇ 13 ರಿಂದ ಪ್ರಾರಂಭಗೊಂಡು ಮೇ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು (ಮೇ 17) ಪೂರ್ವಾಹ್ನ ಅಂಗಣೋತ್ಸವ , ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ದಿನೇಶ್ ಎಂ., ಹಾಗೂ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.
ರಾತ್ರಿ ಅಂಗಣೋತ್ಸವ, ಬಂಗರಕಟ್ಟೆ ಪೂಜೆ, ರಾತ್ರಿ 11 ರಿಂದ ಬೆಳಗಿನ ತನಕ ತುಳು ಯಕ್ಷಗಾನ ನಡೆಯಲಿದೆ.